Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದ ಯೂನಿವರ್ಸಲ್ ಹೆಲ್ತ್ ಕಾರ್ಡ್: ಯಾರೆಲ್ಲಾ, ಹೇಗೆ ಪಡೆಯಬಹುದು?

ರಾಜ್ಯ ಸರ್ಕಾರದ ಯೂನಿವರ್ಸಲ್ ಹೆಲ್ತ್ ಕಾರ್ಡ್: ಯಾರೆಲ್ಲಾ, ಹೇಗೆ ಪಡೆಯಬಹುದು?
ಬೆಂಗಳೂರು , ಶನಿವಾರ, 3 ಫೆಬ್ರವರಿ 2018 (09:26 IST)
ಬೆಂಗಳೂರು: ಕೇಂದ್ರ ಸರ್ಕಾರ ತನ್ನ ಈ ಸಾಲಿನ ಬಜೆಟ್ ನಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ 5 ಲಕ್ಷದವರೆಗಿನ ಉಚಿತ ಚಿಕಿತ್ಸೆ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಪೈಪೋಟಿಗಿಳಿದಿದ್ದು, ಯೂನಿವರ್ಸಲ್ ಹೆಲ್ತ್ ಕಾರ್ಡ್ ನೀಡಲು ಮುಂದಾಗಿದೆ.
 

ಈಗಾಗಲೇ ಈ ಯೋಜನೆ ಸರ್ಕಾರದ ಉದ್ದೇಶದಲ್ಲಿತ್ತು. ಆದರೆ ಜಾರಿಗೆ ತಂದಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ವಿಮೆ ಘೋಷಿಸುತ್ತಿದ್ದಂತೇ ರಾಜ್ಯ ಸರ್ಕಾರವೂ ತನ್ನ ಉದ್ದೇಶಿತ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.

ಇದರಿಂದ ರಾಜ್ಯದ 1 ಕೋಟಿ 43 ಲಕ್ಷ ಕುಟುಂಬಗಳು ಲಾಭ ಪಡೆಯಲಿವೆ. ವಿಶೇಷವೆಂದರೆ ಈ ಯೋಜನೆಗೆ ಕೇವಲ ಬಿಪಿಎಲ್ ಅಥವಾ ಎಪಿಎಲ್ ಕುಟುಂಬ ಎಂಬ ಷರತ್ತು ವಿಧಿಸಲಾಗಿಲ್ಲ. ಸಾಮಾನ್ಯ ಜನತೆಗೂ ಲಾಭವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ.

ಎಲ್ಲಾ ಮಾದರಿಯ ರೋಗಗಳಿಗೂ ಈ ಕಾರ್ಡ್ ಬಳಸಿ ಸರ್ಕಾರದ ಉಚಿತ ಚಿಕಿತ್ಸೆ ಪಡೆಯಬಹುದು. ಒಂದು  ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದೇ ಹೋದಲ್ಲಿ ವೈದ್ಯರು ಸೂಚಿಸುವ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ತಮ್ಮ ಆಧಾರ್ ಸಂಖ್ಯೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದರೆ ಹೆಲ್ತ್ ಕಾರ್ಡ್ ಉಚಿತವಾಗಿ ಒದಗಿಸಲಾಗುತ್ತದೆ! ಕಾರ್ಡ್ ಬಳಕೆ ಮಾಡಬೇಕಾದರೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಚುನಾವಣೆಯಲ್ಲಿ ನಾನು ಸೋತರೆ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಮನೆಯಲ್ಲಿ ಜೀತಕ್ಕಿರುತ್ತೇನೆ-ಕೆ.ಎನ್.ರಾಜಣ್ಣ