Publish Date: Tue, 06 Feb 2018 (08:53 IST)
Updated Date: Tue, 06 Feb 2018 (08:55 IST)
ಮುಂಬೈ: ರಾಹುಲ್ ದ್ರಾವಿಡ್ ಎಂದರೆ ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಚಿರಪರಿಚಿತ. ಅವರ ಸ್ವಭಾವವೇ ನಮಗೆ ಅವರನ್ನು ಇಷ್ಟಪಡುವಂತೆ ಮಾಡುತ್ತದೆ.
ಇದೀಗ ಅಂಡರ್ 19 ವಿಶ್ವಕಪ್ ಗೆದ್ದ ತಂಡಕ್ಕೆ ನಗದು ಪುರಸ್ಕಾರ ವಿಚಾರದಲ್ಲೂ ದ್ರಾವಿಡ್ ನೀಡಿರುವ ಹೇಳಿಕೆಯೊಂದನ್ನು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.
ಅಂಡರ್ 19 ವಿಶ್ವಕಪ್ ಗೆದ್ದ ಮೇಲೆ ಬಿಸಿಸಿಐ ಕೋಚ್ ದ್ರಾವಿಡ್ ಗೆ ಗರಿಷ್ಠ 50 ಲಕ್ಷ ರೂ. ಇತರ ಸಹಾಯಕ ಸಿಬ್ಬಂದಿಗೆ 30 ಲಕ್ಷ ರೂ. ಬಹುಮಾನ ಹಣ ಘೋಷಿಸಿತ್ತು. ಇದೀಗ ದ್ರಾವಿಡ್ ಇದರ ಬಗ್ಗೆ ಚಕಾರವೆತ್ತಿದ್ದಾರೆ.
ನನ್ನ ಹಾಗೇ ಎಲ್ಲಾ ಸಹಾಯಕ ಸಿಬ್ಬಂದಿಗೂ ಸಮಾನವಾಗಿ ಪರಿಶ್ರಮಪಟ್ಟಿದ್ದಾರೆ. ಹಾಗಿರುವಾಗ ನನಗೆ ಮಾತ್ರ ಹೆಚ್ಚು ನಗದು ಘೋಷಿಸಿ ಅವರಿಗೆಲ್ಲಾ ಕಡಿಮೆ ಘೋಷಿಸಿರುವುದು ಸರಿಯಲ್ಲ ಎಂದು ದ್ರಾವಿಡ್ ಭಾರತಕ್ಕೆ ಬಂದಿಳಿದ ಮೇಲೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲವೇ ಮೇರು ವ್ಯಕ್ತಿತ್ವ ಎಂದರೆ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ