ಸೆಂಚೂರಿಯನ್: ಕ್ರಿಕೆಟ್ ನಲ್ಲಿ ಅದೆಷ್ಟೋ ತಮಾಷೆ, ಅಣಕಗಳು ನಡೆಯುತ್ತವೆ. ಅದಕ್ಕೆ ನಿನ್ನೆಯ ಭಾರತ-ದ.ಆಫ್ರಿಕಾ ಪಂದ್ಯ ಮತ್ತೊಂದು ಸೇರ್ಪಡೆಯಾಯಿತು. ಗೆಲುವಿಗೆ ಎರಡು ರನ್ ಬೇಕಾಗಿದ್ದಾಗ ಊಟದ ವಿರಾಮಕ್ಕೆ ಕರೆ ನೀಡಿ ಅಂಪಾಯರ್ ಗಳು ತಮಾಷೆಗೆ ಗ್ರಾಸವಾಗಿದ್ದಾರೆ.
ಸಾಮಾನ್ಯವಾಗಿ ಏಕದಿನ ಪಂದ್ಯಗಳಲ್ಲಿ ಒಮದು ಇನಿಂಗ್ಸ್ ಮುಗಿದ ಬಳಿಕವಷ್ಟೇ ಲಂಚ್ ಅವರ್ ನೀಡಲಾಗುತ್ತದೆ. ಆದರೆ ನಿನ್ನೆ ಆಫ್ರಿಕಾ ಬೇಗನೇ ಆಲೌಟ್ ಆಗಿತ್ತು. ಭಾರತವೂ 18 ಓವರ್ ಗಳಲ್ಲೇ ಗುರಿ ಬಳಿಗೆ ಬಂದಿತ್ತು. ಅಂದರೆ ಸರಿಯಾಗಿ ಗೆಲುವಿಗೆ 2 ರನ್ ಇರುವಾಗ ನಿಯಮದ ಪ್ರಕಾರ ಊಟದ ವಿರಾಮವಾಗಿತ್ತು.
ಅಂಪಾಯರ್ ಗಳು ನಿಯಮ ಮೀರುವಂತಿಲ್ಲ ಎಂಬ ಕಾರಣಕ್ಕೆ ಊಟದ ವಿರಾಮ ಘೋಷಿಸಿಬಿಟ್ಟರು. ಕ್ರೀಸ್ ನಲ್ಲಿ ಕೊಹ್ಲಿ ಅಚ್ಚರಿಯಾಗಿ ಅಂಪಾಯರ್ ಗಳ ಜತೆ ಮಾತುಕತೆಗೆ ಮುಂದಾದರೂ ನಿಯಮ ಮುರಿಯುವಂತಿಲ್ಲ ಎಂದು ಅಂಪಾಯರ್ ಗಳು ಕೈ ಚೆಲ್ಲಿದರು.
ಇದು ಟ್ವಿಟರ್ ನಲ್ಲಿ ಭಾರೀ ಟ್ರೋಲ್ ಗೆ ಒಳಗಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂತೂ ಅಂಪಾಯರ್ ಗಳು ಬ್ಯಾಂಕ್ ನೌಕರರಂತೆ ಊಟ ಮಾಡಿ ಬನ್ನಿ ಅಂತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ