Publish Date: Mon, 05 Feb 2018 (11:26 IST)
Updated Date: Mon, 05 Feb 2018 (11:29 IST)
ಸೆಂಚೂರಿಯನ್: ಎದುರಾಳಿಗಳಿಗೆ ಏಟಿಗೆ ಎದಿರೇಟು ಕೊಡುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿಸ್ಸೀಮ. ಇದೀಗ ನಿನ್ನೆ ಪಂದ್ಯದಲ್ಲೂಅದನ್ನೇ ಮಾಡಿದ್ದಾರೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಪಕ್ಕೆಲುಬಿಗೆ ಆಫ್ರಿಕಾ ಬೌಲರ್ ಕಗಿಸೋ ರಬಾಡಾ ಬಾಲ್ ಎಸೆದಿದ್ದರು. ಅರೆ ಕ್ಷಣ ನೋವಿನಿಂದ ನರಳಿದ ವಿರಾಟ್ ಕೊಹ್ಲಿ ಮರುಕ್ಷಣವೇ ಏಟು ತಿಂದ ಹುಲಿಯಂತೆ ತಲೆ ಕೊಡವಿ ಮುಂದಿನ ಎಸೆತಕ್ಕೆ ಸಿದ್ಧರಾದರು.
ಆ ಎಸೆತವನ್ನೂ ರಬಾಡಾ ಮತ್ತೆ ಎದೆ ಮಟ್ಟಕ್ಕೆ ಎಸೆದರು. ಮರು ಕ್ಷಣದಲ್ಲೇ ಕೊಹ್ಲಿ ಅದನ್ನು ಸಿಕ್ಸರ್ ಗೆ ಅಟ್ಟಿದರು! ಈ ಮೂಲಕ ತಕ್ಕ ಪ್ರತ್ಯುತ್ತರ ನೀಡಿದರು. ರಬಾಡಾ ಪೆಚ್ಚಾಗಿ ನಿಂತಿದ್ದರು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ