Publish Date: Fri, 09 Feb 2018 (08:20 IST)
Updated Date: Fri, 09 Feb 2018 (08:23 IST)
ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಯಲ್ಲಿ ಆಯ್ಕೆಯಾದ ಕನ್ನಡಿಗ ಕೆಎಲ್ ರಾಹುಲ್ ಗೆ ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ.
ಶಿಖರ್ ಧವನ್ ಈಗಾಗಲೇ ಸರಣಿಯಲ್ಲಿ ಉತ್ತಮವಾಗಿ ಆಡಿ ತಮ್ಮ ಸ್ಥಾನ ಗಟ್ಟಿಪಡಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಕಳೆದ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನವೆನ್ನುವುದು ಹಾಟ್ ಸೀಟ್ ಇದ್ದಂತೆ. ಒಂದೇ ಒಂದು ಪಂದ್ಯದಲ್ಲಿ ವಿಫಲವಾದರೂ ಅವಕಾಶಕ್ಕಾಗಿ ಕಾಯುತ್ತಿರುವ ಇನ್ನೊಬ್ಬ ಆಟಗಾರ ಸಿಗುತ್ತಾನೆ.
ಇದೀಗ ಕೆಎಲ್ ರಾಹುಲ್ ಕೂಡಾ ಫಾರ್ಮ್ ನಲ್ಲಿದ್ದರೂ ಅವಕಾಶ ಸಿಗದೇ ಬೆಂಚ್ ಕಾಯಿಸುತ್ತಿದ್ದಾರೆ. ರೋಹಿತ್ ಶರ್ಮಾ ವಿಫಲವಾಗುತ್ತಿರುವುದರಿಂದ ನಾಯಕ ಕೊಹ್ಲಿ ತಮ್ಮ ಪ್ರೀತಿ ಪಾತ್ರ ರಾಹುಲ್ ಗೆ ಅವಕಾಶ ಕೊಡುತ್ತಾರಾ? ಅಥವಾ ನಿರ್ಣಾಯಕ ಘಟ್ಟದಲ್ಲಿ ತಂಡದ ಸಮತೋಲನದಲ್ಲಿ ಬದಲಾವಣೆ ಮಾಡದೇ ರೋಹಿತ್ ಗೆ ಇನ್ನೊಂದು ಅವಕಾಶ ಕೊಡುತ್ತಾರಾ? ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ