Publish Date: Sun, 11 Feb 2018 (12:01 IST)
Updated Date: Sun, 11 Feb 2018 (12:02 IST)
ವಾಂಡರರ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿನ್ನೆ ಕ್ರಿಕೆಟ್ ಲೋಕದ ಎರಡು ದಿಗ್ಗಜ ಆಟಗಾರರ ದಾಖಲೆ ಮುರಿದಿದ್ದಾರೆ. ತಮ್ಮ 75 ರನ್ ಗಳ ಇನಿಂಗ್ಸ್ ನಲ್ಲಿ ಕೊಹ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಮೊಹಮ್ಮದ್ ಅಜರುದ್ದೀನ್ ರ 9,378 ರನ್ ಮತ್ತು ಕ್ರಿಸ್ ಗೇಲ್ 9,420 ರನ್ ಗಳಿಸಿದ್ದಾರೆ. ಇವರಿಬ್ಬರನ್ನೂ ಮೀರಿ ಕೊಹ್ಲಿ ಇದೀಗ ಏಕದಿನ ಪಂದ್ಯಗಳ ರನ್ ಗಳಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದವರ ಪೈಕಿ ಕೊಹ್ಲಿ ಇದೀಗ ಭಾರತೀಯರ ಪೈಕಿ 5 ನೇ ಮತ್ತು ವಿಶ್ವದ 16 ನೇ ಆಟಗಾರರಾಗಿದ್ದಾರೆ.ಇನ್ನೂ 29 ವರ್ಷ ವಯಸ್ಸಿನವರಾದ ಕೊಹ್ಲಿಗೆ ಮುಂದೊಂದು ದಿನ ನಂ.1 ಆಗುವುದು ಕಷ್ಟವೇನಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ