Publish Date: Tue, 13 Feb 2018 (16:21 IST)
Updated Date: Tue, 13 Feb 2018 (16:24 IST)
ಐಸ್ ಸ್ಕೇಟರ್ ಯೂರಾ ಮಿನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಚಲಿಗಾಲದ ಒಲಿಂಪಿಕ್ಸ್‌ನಲ್ಲಿ ಭಾನುವಾರ ತನ್ನ ಮೆದಲ ಪ್ರವೇಶ ಮಾಡಿದ್ದಾರೆ ಆದರೆ ಇದು ಯೋಜಿಸಿದ್ದ ಹಾಗೆ ನಡೆಯಲಿಲ್ಲ, ಕಾರಣ ಸ್ಕೇಟ ಶುರುಮಾಡಿದ 5 ಸೆಕೆಂಡುಗಳಲ್ಲಿ ಯೂರಾ ಮಿನ್ ಅವರು ಉಡುಪು ಜಾರಿತು. ಆದರೆ ನಿರಂತರವಾಗಿ ಜೊತೆಗಾರ ಅಲೆಕ್ಸಾಂಡರ್ ಗ್ಯಾಮೆಲಿನ್ ಅವರು ಯೂರಾ ಮಿನ್ ಸುತ್ತ ಸುತ್ತುತ್ತಿರುವುದರಿಂದ ಮುಜುಗರದಿಂದ ತಪ್ಪಿಸಿಕೊಂಡಿದ್ದಾರೆ.
ಸ್ಕೇಟ ಮಾಡುವುದನ್ನು ನಿಲ್ಲಿಸಿದೇ 22 ವರ್ಷದ ಯೂರಾ ಮಿನ್ ನೃತ್ಯವನ್ನು ಮುಂದುವರಿಸಿ, ನೃತ್ಯದ ಮಧ್ಯದಲ್ಲಿ ಹಲವು ಬಾರಿ ತನ್ನ ಉಡುಪನ್ನು ಸರಿಪಡಿಸುವ ಮೂಲಕ ತಮ್ಮ ಪ್ರದರ್ಶನವನ್ನು ಪೂರ್ಣಗೊಳಿಸಿ 9th ನೇ ಸ್ಥಾನವನ್ನು ಗಳಿಸಿದ್ದಾರೆ.
''ಇದು ನಮ್ಮ ಮೊದಲ ಒಲಿಂಪಿಕ್ಸ್, ನಮ್ಮ ಮೊದಲ ಪ್ರದರ್ಶನದಲ್ಲೇ ನನ್ನ ಉಡುಪು ಸಂಪೂರ್ಣವಾಗಿ ಜಾರಿದ್ದರೆ, ಅದು ನನ್ನ ಜೀವನದ ಬಹು ದೊಡ್ಡ ದುರಂತವಾಗುತ್ತಿತ್ತು.'' ಎಂದು ಯೂರಾ ಮಿನ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.