Publish Date: Sat, 30 Dec 2017 (10:49 IST)
Updated Date: Sat, 30 Dec 2017 (10:53 IST)
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ಜಯಿಸಿದ ವಿಶ್ವನಾಥ್ ಆನಂದ್ ಅವರಿಗೆ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸೌದಿ ಅರೇಬಿಯಾದ ರಿಯಾಧ್ ನಲ್ಲಿ ಗುರುವಾರ ನಡೆದ ಫಿಡೆ ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ನ ಫೈನಲ್ ಟೈ ಬ್ರೇಕರ್ ನಲ್ಲಿ ಆನಂದ್ ಅವರು ವ್ಲಾಡಿಮಿರ್ ಫೆಡೊಸೀವ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ್ದಾರೆ.
ಇದರಿಂದ ಸಂತೋಷಗೊಂಡ ರಾಷ್ಟ್ರಪತಿ ಅವರು ಆನಂದ ಅವರನ್ನು ಕುರಿತು ‘ ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ಗೆದ್ದಿರುವ ನಿಮಗೆ ಅಭಿನಂದನೆಗಳು, ದಶಕಗಳಿಂದಲೂ ದೃಢ ಸಂಕಲ್ಪದೊಂದಿಗೆ ಪ್ರಶಸ್ತಿಗೆ ಯತ್ನಿಸುವ ನೀವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ’ ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ