Select Your Language

Notifications

webdunia
webdunia
webdunia
webdunia

ಸೌದಿ ಅರೇಬಿಯಾದಲ್ಲಿ ಅಗ್ನಿ ಅವಘಡ: 10 ಭಾರತೀಯರು ಬಲಿ

ಸೌದಿ ಅರೇಬಿಯಾದಲ್ಲಿ ಅಗ್ನಿ ಅವಘಡ: 10 ಭಾರತೀಯರು ಬಲಿ
ರಿಯಾದ್ , ಗುರುವಾರ, 13 ಜುಲೈ 2017 (12:13 IST)
ರಿಯಾದ್:ಸೌದಿ ಅರೇಬಿಯಾದ ದಕ್ಷಿಣದ ನಜ್ರಾನ್ ಪಟ್ಟಣದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 10 ಮಂದಿ ಭಾರತೀಯರು ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
 
ವಿದೇಶಿ ಕಾರ್ಮಿಕರು ಬಾಡಿಗೆಗೆ ಇದ್ದ ಮನೆಯಲ್ಲಿ ಈ ದುರಂತ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಮಿಕರು ನಿರ್ಮಾಣ ಸಂಸ್ಥೆಯೊಂದರಲ್ಲಿ ಕಾರ್ಯನಿರ್ಬಹಿಸುತ್ತಿದ್ದರು. ಏರ್ ಕಂಡೀಷನರ್ ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
 
ಈ ನಡುವೆ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಜಾ ಸ್ಮಗ್ಲಿಂಗ್ ಹೊಸದೇನಲ್ಲ, ಡಿಐಜಿ ಡಿ. ರೂಪಾ ಅನ್ವೇಷಣೆ ಮಾಡಿಲ್ಲ: ಡಿಜಿ