Publish Date: Mon, 12 Feb 2018 (11:44 IST)
Updated Date: Mon, 12 Feb 2018 (11:46 IST)
ಪೋರ್ಟ್ ಆಫ್ ಎಲಿಜೆಬತ್: ಐದನೇ ಏಕದಿನ ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಂಡು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಮಳೆ ಕಾಟ ಕೊಡುವ ಲಕ್ಷಣಗಳಿವೆ.
ಪೋರ್ಟ್ ಆಫ್ ಎಲಿಜೆಬೆತ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ದೊರಕಿದೆ. ಕಳೆದ ಪಂದ್ಯಕ್ಕೂ ಮಳೆ, ಮಂದ ಬೆಳಕಿನಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ನಿರ್ಧರಿಸಲಾಗಿತ್ತು.
ಇದೀಗ ಈ ಪಂದ್ಯಕ್ಕೂ ಮಳೆ ಅಡಚಣೆಯಾಗುವ ಸುದ್ದಿ ಬಂದಿದೆ. ಮತ್ತೆ ಮಳೆಯಾಗಿ ಪಂದ್ಯಕ್ಕೆ ಯಾವುದೇ ತೊಂದರೆಯಾಗದಿದ್ದರೆ ಸಾಕು ಎಂಬುದು ಭಾರತೀಯ ಆಟಗಾರರ ಪ್ರಾರ್ಥೆನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ