Select Your Language

Notifications

webdunia
webdunia
webdunia
webdunia

ಸಿಡಿಯುತ್ತಿದ್ದ ವಿರಾಟ್ ಕೊಹ್ಲಿಯಲ್ಲಿ ಇಷ್ಟೊಂದು ಬದಲಾವಣೆ?!

ಸಿಡಿಯುತ್ತಿದ್ದ ವಿರಾಟ್ ಕೊಹ್ಲಿಯಲ್ಲಿ ಇಷ್ಟೊಂದು ಬದಲಾವಣೆ?!
ನವದೆಹಲಿ , ಗುರುವಾರ, 15 ಫೆಬ್ರವರಿ 2018 (08:25 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಬಾಲ್ ವೇಸ್ಟ್ ಮಾಡುವ ಜಾಯಮಾನದವರೇ ಅಲ್ಲ. ಅವರು ಬ್ಯಾಟಿಂಗ್ ಗೆ ಕುದುರಿಕೊಳ್ಳಲು ತುಂಬಾ ಹೊತ್ತು ತೆಗೆದುಕೊಳ್ಳುವವರೂ ಅಲ್ಲ.
 

ಒಮ್ಮೆ ಕುದುರಿಕೊಂಡರೆ ಮುಗಿಯಿತು ಎದುರಾಳಿ ಕತೆ. ಬೌಂಡರಿ ಮೇಲೆ ಬೌಂಡರಿ ಗಿಟ್ಟಿಸುತ್ತಾ ಎದುರಾಳಿಗಳನ್ನು ಸುಸ್ತು ಹೊಡೆಸುತ್ತಾರೆ. ಒಂದು ವೇಳೆ ಅವರು ಶತಕ ಹೊಡೆದರೆ 20-25 ಬಾಲ್ ಕಡಿಮೆಯೇ ಬಳಸಿರುತ್ತಾರೆ.

ಆದರೆ ದ.ಆಫ್ರಿಕಾ ಸರಣಿಯಲ್ಲಿ ಕೊಹ್ಲಿ ಏಕ್ ದಂ ಬದಲಾಗಿದ್ದಾರೆ. ಅವರು ಇದುವರೆಗೂ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಗಳನ್ನೇ ಆಡಿದ್ದಾರೆ. ಆದರೆ ಎಂದಿನಂತೆ ಕಡಿಮೆ ಬಾಲ್ ನಲ್ಲಿ ರನ್ ಚಚ್ಚುವ ಅವರ ಎಂದಿನ ಶೈಲಿ ಮಾಯವಾಗಿದೆ. ಇನ್ನೂ ಹೇಳಬೇಕೆಂದರೆ ಈ ಏಕದಿನ ಸರಣಿಯಲ್ಲಿ ಕೊಹ್ಲಿ ರನ್ ಗಳಿಸುವ ರೀತಿ ಬದಲಾಗಿದೆ.

ಎಂದಿನಂತೆ ಬಾಲ್ ಗಿಂತ ಹೆಚ್ಚು ರನ್ ಗಳಿಸುತ್ತಿಲ್ಲ. ಬದಲಾಗಿ ನಿಧಾನಗತಿಯ ರನ್ ಪೇರಿಸುತ್ತಿದ್ದಾರೆ. ಬಹುಶಃ ಟೆಸ್ಟ್ ಸರಣಿಯ ಸೋಲಿನ ನಂತರ ಕೊಹ್ಲಿ ತಂಡಕ್ಕೆ ಭದ್ರ ಬುನಾದಿ ಕಂಡುಕೊಳ್ಳಲು ಈ ಅಸ್ತ್ರ ಕಂಡುಕೊಂಡಿರಬಹುದು. ವಿಕೆಟ್ ಪಟ ಪಟನೇ ಉರುಳುವುದನ್ನು ತಪ್ಪಿಸುವುದಕ್ಕೆ ಈ ಮೊರೆ ಹೋಗಿರಬಹುದು.

ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 112 ರನ್ ಗಳಿಸಲು 119 ಬಾಲ್ ತೆಗೆದುಕೊಂಡರು. ದ್ವಿತೀಯ ಏಕದಿನ ಪಂದ್ಯದಲ್ಲಿ 46 ರನ್ ಗಳಿಸಲು 50 ಬಾಲ್, ತೃತೀಯ ಪಂದ್ಯದಲ್ಲಿ 159 ಬಾಲ್ ಗಳಲ್ಲಿ 160 ರನ್,  ನಾಲ್ಕನೇ ಏಕದಿನದಲ್ಲಿ 83 ಬಾಲ್ ಗಳಲ್ಲಿ 75 ರನ್ ಮತ್ತು ಐದನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 54 ಬಾಲ್ ಎದುರಿಸಿ 36 ರನ್ ಗೆ ವಿಕೆಟ್ ಒಪ್ಪಿಸಿದರು. ದುರಾದೃಷ್ಟಕ್ಕೆ ಅವರು ಐದನೇ ಏಕದಿನ ಪಂದ್ಯದಲ್ಲಿ ರನೌಟ್ ಆಗಿದ್ದರು. ಹಾಗಿದ್ದರೂ ಕೊಹ್ಲಿಯ ಈ ಬದಲಾದ ಅಪ್ರೋಚ್ ಅವರ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ಔಟ್ ಮಾಡಿ ಸೆಂಡ್ ಆಫ್ ಮಾಡಿದ ಆಫ್ರಿಕಾ ಬೌಲರ್ ಗೆ ಶಿಕ್ಷೆ