Publish Date: Wed, 14 Feb 2018 (09:10 IST)
Updated Date: Wed, 14 Feb 2018 (09:13 IST)
ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಕೊನೆಗೂ ಫಾರ್ಮ್ ಕಂಡುಕೊಂಡು ಶತಕ ಗಳಿಸಿದರೂ ರೋಹಿತ್ ಶರ್ಮಾಗೆ ಅಭಿಮಾನಿಗಳಿಂದ ಮೂದಲಿಕೆ ತಪ್ಪಲಿಲ್ಲ.
ಇದಕ್ಕೆ ಕಾರಣ ರನೌಟ್ ಗಳು. ರೋಹಿತ್ ಕ್ರೀಸ್ ನಲ್ಲಿದ್ದಾಗಲೇ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ರನೌಟ್ ಗೆ ಕಾರಣವಾಗಿದ್ದಕ್ಕೆ ಅಭಿಮಾನಿಗಳು ರೋಹಿತ್ ಶರ್ಮಾಗೆ ಲೇವಡಿ ಮಾಡಿದ್ದಾರೆ. ಎರಡೂ ಬಾರಿಯೂ ರೋಹಿತ್ ತಪ್ಪಿನಿಂದಾಗಿ ಇಬ್ಬರು ಔಟಾಗಿದ್ದರು. ಇದೇ ಕಾರಣಕ್ಕೆ ಶತಕ ಗಳಿಸಿದರೂ ಅವರಿಗೆ ಟೀಕೆ ತಪ್ಪಲಿಲ್ಲ.
‘ನೀವು ಎಷ್ಟು ರನೌಟ್ ಮಾಡಿಸುತ್ತೀರಿ ರೋಹಿತ್?’ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ‘ಈ ಮನುಷ್ಯ ಅದು ಹೇಗೆ ಯೊ ಯೊ ಫಿಟ್ನೆಸ್ ಟೆಸ್ಟ್ ಪಾಸಾಗ್ತಾನೋ’ ಎಂದಿದ್ದಾರೆ. ಕೆಲವರಂತೂ ರೋಹಿತ್ ರನ್ನು ಸ್ವಾರ್ಥಿ ಎಂದು ಜರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ