Select Your Language

Notifications

webdunia
webdunia
webdunia
webdunia

ಬಹು ನಿರೀಕ್ಷಿತ ಚಿತ್ರ 'ಪದ್ಮಾವತ್' ಜ. 25ಕ್ಕೆ ತೆರೆಯಮೇಲೆ ಬರಲಿದೆ..!!

ಬಹು ನಿರೀಕ್ಷಿತ ಚಿತ್ರ 'ಪದ್ಮಾವತ್' ಜ. 25ಕ್ಕೆ ತೆರೆಯಮೇಲೆ ಬರಲಿದೆ..!!

ನಾಗಶ್ರೀ ಭಟ್

ಬೆಂಗಳೂರು , ಸೋಮವಾರ, 8 ಜನವರಿ 2018 (17:19 IST)
ಹಲವಾರು ವಿವಾದಗಳಿಗೆ ತುತ್ತಾಗಿದ್ದ ಸಂಜಯ್ ಲೀಲಾ ಬನ್ಸಾಲಿಯವರ ನಿರ್ಮಾಣದ 'ಪದ್ಮಾವತ್' ಜನವರಿ 25, 2018 ರಂದು ಬಿಡುಗಡೆಯಾಗುತ್ತಿದೆ.

ಇದು ಸೂಫಿ ಲೇಖಕರಾದ ಮಲಿಕ್ ಮುಹಮ್ಮದ್ ಜಯಾಸಿ ಅವರು 1950 ರಲ್ಲಿ ಬರೆದ 'ಪದ್ಮಾವತ್' ಮಹಾಕಾವ್ಯವನ್ನು ಆಧರಿಸಿ ನಿರ್ಮಿಸಿರುವ ಚಿತ್ರವಾಗಿದೆ. ಚಿತ್ರದ ಹೆಸರನ್ನು 'ಪದ್ಮಾವತಿ' ಇಂದ 'ಪದ್ಮಾವತ್'ಗೆ ಬದಲಾಯಿಸಿ ಚಿತ್ರದ ಹಲವಾರು ಸೀನ್‌ಗಳನ್ನು ಮರುಚಿತ್ರಿಸುವಂತೆ ಸೂಚಿಸಿದ ಬಳಿಕ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.
 
'ಪದ್ಮಾವತ್' ಹೆಸರಿನಿಂದ ಬಿಡುಗಡೆಯಾಗುತ್ತಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಶಾಹಿದ ಕಪೂರ್ ಮತ್ತು ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಚಿತ್ರವು ಅದರ ಅತಿ ಹೆಚ್ಚು ಬಜೆಟ್‌ನಿಂದ, ಚಿತ್ರಿಸುವ ಸಮಯದಲ್ಲಾದ ಗಲಾಟೆಗಳಿಂದ ಹಾಗೂ ರಾಣಿ ಪದ್ಮಾವತಿಯ ಪ್ರತಿಷ್ಠೆಗೆ ಅವಮಾನವಾಗುವಂತೆ ತೋರಿಸಲಾಗಿದೆ ಎನ್ನುವ ವಾದವಿವಾದಗಳಿಂದ ಹೆಚ್ಚಿನ ಜನರಲ್ಲಿ ಕುತೂಹಲವನ್ನು ಕೆರಳಿಸಿದ್ದು ಅನೇಕ ಜನರು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
 
ಎಲ್ಲಾ ಅಂದು ಕೊಂಡಂತೆಯೇ ಆಗಿದ್ದರೆ ಡಿಸೆಂಬರ್ 1, 2017 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಹಲವು ವಿವಾದಗಳಿಂದಾಗಿ ಜನವರಿ 25, 2018 ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಅಕ್ಷಯ್ ಕುಮಾರ ಅಭಿನಯದ ಪ್ಯಾಡ್ ಮ್ಯಾನ್ ಸಹ ಬಿಡುಗಡೆಯಾಗುತ್ತಿದೆ. 'ಪದ್ಮಾವತ್' ದೊಡ್ಡ ಬಜೆಟ್‌ನ ಚಿತ್ರವಾಗಿರುವುದರಿಂದ ಜ. 25ರ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ಮನೋಜ್ ಪಾಂಡೆ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಅವರ ಅಭಿನಯದ ಚಿತ್ರ ಅಯಾರಿ ಯ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಾವಿ ಸೊಸೆಗೆ ರಣವೀರ್ ಪೋಷಕರು ನೀಡಿದ ಉಡುಗೊರೆ ಏನು ಗೊತ್ತಾ...?