Publish Date: Mon, 08 Jan 2018 (12:11 IST)
Updated Date: Mon, 08 Jan 2018 (12:18 IST)
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜನವರಿ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದು, ಭಾವಿ ಸೊಸೆಗೆ ರಣವೀರ್ ಪೋಷಕರು ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ.
ರಣವೀರ್ ಸಿಂಗ್ ಅವರ ತಂದೆ-ತಾಯಿ ದೀಪಿಕಾ ಅವರಿಗೆ ಡೈಮಂಡ್ ಸೆಟ್ ವೊಂದನ್ನು ನೀಡಿದ್ದು, ಜೊತೆಗೆ ಸವ್ಯಸಾಚಿ ಮುಖರ್ಜಿ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರಂತೆ. ಇದನ್ನು ಸ್ವೀಕರಿಸಿದ ನಟಿ ದೀಪಿಕಾ ಅವರು ತುಂಬಾ ಸಂತೋಷಗೊಂಡಿದ್ದಾರಂತೆ. ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ ಅವರು ಕೂಡ ಮದುವೆ ವಿಷಯಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಮಗಳಿಗೆ ಸ್ವಾತಂತ್ರ್ಯ ನೀಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ದೀಪಿಕಾ ಹಾಗು ರಣವೀರ್ ಅವರ ಮದುವೆಗೆ ಮನೆಯವರ ಒಪ್ಪಿಗೆ ದೊರೆತಿದ್ದು, ಈ ಜೋಡಿ ಯಾವಾಗ ಹಸೆಮಣೆ ಏರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ