Publish Date: Fri, 22 Dec 2017 (06:19 IST)
Updated Date: Fri, 22 Dec 2017 (06:37 IST)
ಮುಂಬೈ: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿಗೆ ಮತ್ತಂದೂ ಖುಷಿಯ ಸುದ್ದಿ. ವಿರಾಟ್ ಇದೇ ಮೊದಲ ಬಾರಿಗೆ ಭಾರತದ ಮೋಸ್ಟ್ ವ್ಯಾಲ್ಯೂಬಲ್ ಸೆಲೆಬ್ರಿಟಿ ಬ್ರಾಂಡ್ಸ್ ಲಿಸ್ಟ್ ನಲ್ಲಿ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಈ ಲಿಸ್ಟ್ ನಲ್ಲಿ ಪ್ರತಿವರ್ಷ ನಂಬರ್ ಒನ್ ಸ್ಥಾನದಲ್ಲಿರುತ್ತಿದ್ದ ಶಾರೂಕ್ ಖಾನ್ ಅವರನ್ನು ಹಿಂದಿಕ್ಕಿದ್ದಾರಂತೆ ವಿರಾಟ್ ಕೊಹ್ಲಿ. ಈ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿರುವವರು ಪ್ರತಿಷ್ಠಿತ ಬ್ರಾಂಡ್ ಗಳ ಮೊದಲ ಆಯ್ಕೆಯಾಗಿದ್ದು, ಇವರು ಈ ವರ್ಷ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿದ್ದಾರಂತೆ.
ಇನ್ನು ವಿರಾಟ್ ಕೊಹ್ಲಿಯ ಬ್ರಾಂಡ್ ವ್ಯಾಲ್ಯೂ 144 ಮಿಲಿಯನ್ ಡಾಲರ್ ಆಗಿದ್ದು, ಶಾರೂಕ್ ಖಾನ್ ಅವರ ಬ್ರಾಂಡ್ ವ್ಯಾಲ್ಯೂ 106 ಮಿಲಿಯನ್ ಆಗಿದೆ. ನಂತರದ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ