Publish Date: Thu, 21 Dec 2017 (22:13 IST)
Updated Date: Thu, 21 Dec 2017 (22:19 IST)
ನವದೆಹಲಿ: ದಿಲ್ಲಿ ರಣಜಿ ತಂಡದ ಬ್ಯಾಟ್ಸ್ ಮನ್ ಕುನಾಲ್ ಚಾಂಡೇಲಾ ಅವರು ಪಂದ್ಯಕ್ಕಾಗಿ ತಾನು ಡಿ.20 ರಂದು ಬರೆಯಬೇಕಾಗಿದ್ದ ಸೆಮಿಸ್ಟರ್ ಪರೀಕ್ಷೆಯನ್ನೆ ತ್ಯಾಗ ಮಾಡಿದ್ದಾರೆ.
ಪುಣೆಯಲ್ಲಿ ನಡೆದ ಬಂಗಾಳ ವಿರುದ್ಧದ ರಣಜಿ ಸೆಮಿಫೈನಲ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕುನಾಲ್ ಚಾಂಡೆಲಾ ಅವರು ಶತಕ ಬಾರಿಸಿ ರಣಜಿ ತಂಡ ಫೈನಲ್ ಗೆ ಪ್ರವೇಶಿಸಲು ಕಾರಣರಾದರು. ಇವರು ಗರ್ವಾಲ್ ನಲ್ಲಿರುವ ಹೇಂಬತಿ ನಂದನ್ ಬಹುಗುಣ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ(ಐಟಿ) ಓದುತ್ತಿದ್ದು, ಡಿ.20 ರಂದು ಅವರು ಪರೀಕ್ಷೆ ಬರೆಯಬೇಕಾಗಿತ್ತು.
ಆದರೆ ಸೆಮಿಫೈನಲ್ ಪಂದ್ಯದ ಕಾರಣ ಅವರು ಆ ಪರೀಕ್ಷೆಯನ್ನು ತ್ಯಾಗಮಾಡಬೇಕಾಯಿತು ಎಂದು ಕುನಾಲ್ ಅವರು ಹೇಳಿದ್ದಾರೆ. ಇನ್ನು ಮುಂದೆ ಓದಲು ಸಮಯವನ್ನು ಹೊಂದಿಸಿಕೊಳ್ಳುವುದಾಗಿ ಹಾಗು ವಿಶೇಷ ತರಗತಿಗಳಿಗೆ ಹಾಜರಾಗುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ