Select Your Language

Notifications

webdunia
webdunia
webdunia
Friday, 18 April 2025
webdunia

ಅಂತೂ ಮಧುಚಂದ್ರ ಮುಗಿಸಿ ಭಾರತಕ್ಕೆ ಮರಳಿದ್ರಪ್ಪಾ ವಿರುಷ್ಕಾ ಜೋಡಿ!

ಹನಿಮೂನ್
ದೆಹಲಿ , ಬುಧವಾರ, 20 ಡಿಸೆಂಬರ್ 2017 (14:52 IST)
ದೆಹಲಿ: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್-ಅನುಷ್ಕಾ ಜೋಡಿ  ಹನಿಮೂನ್ ನಲ್ಲೇ ಮಗ್ನವಾಗಿದ್ದು ಈಗ ವಾಪಾಸು ಭಾರತಕ್ಕೆ ಮರಳಿ ಬಂದಿದ್ದಾರೆ.


ಡಿಸೆಂಬರ್ 11 ರಂದು ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡ ಈ ಜೋಡಿ ಹನಿಮೂನ್ ಗಾಗಿ ವಿದೇಶ ಪ್ರಯಾಣ ಮಾಡಿ ಈಗ ಮರಳಿ ದೆಹಲಿಗೆ ಬಂದು ತಲುಪಿದ್ದಾರೆ. ಸದ್ಯಕ್ಕೆ ಇವರು ಕುಟುಂಬದವರ ಜೊತೆ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.


ಇವರು ತೊಟ್ಟ ಸಾಂಪ್ರದಾಯಕ ಉಡುಗೆಯ ಪೋಟೋ  ಎಲ್ಲರ ಗಮನ ಸೆಳೆದಿದ್ದು ಈಗ ಈ ಪೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇವರು ಗುರುವಾರ ರಾಜಧಾನಿ ದೆಹಲಿಯಲ್ಲಿ ತಮ್ಮ ಬಂಧುಮಿತ್ರರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಾರೆ. ನಂತರ ಇವರು ಡಿ.26 ರಂದು ಮುಂಬೈನಲ್ಲಿ ಇನ್ನೊಂದು ಔತಣಕೂಟ ಏರ್ಪಡಿಸಿದ್ದು,ಇದರಲ್ಲಿ ಸಿನೆಮಾ, ಕ್ರೀಡೆ ಹಾಗು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖರು ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನೊಂದಿಗೆ ವರ್ಷಕ್ಕೆ ವಿದಾಯ ಹೇಳಲಿರುವ ಟೀಂ ಇಂಡಿಯಾ