Publish Date: Mon, 08 Jan 2018 (11:49 IST)
Updated Date: Mon, 08 Jan 2018 (11:55 IST)
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಸಿನಿ ಲೋಕದ ಗಣ್ಯರೂ ಯಶ್ ಗೆ ಹುಟ್ಟು ಹಬ್ಬದ ಶುಭಾಷಯ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ನವರಸನಾಯಕ ಜಗ್ಗೇಶ್ ದೊಡ್ಡ ಆಸೆಯನ್ನೇ ಹೊರ ಹಾಕಿದ್ದಾರೆ.
ಟ್ವಿಟರ್ ನಲ್ಲಿ ಯಶ್ ಗೆ ಶುಭ ಕೋರಿರುವ ಜಗ್ಗೇಶ್ ರಾಯರ ದಯೆಯಿಂದ ಸದ್ಯದಲ್ಲೇ ಮನೆಯಲ್ಲಿ ತೊಟ್ಟಿಲು ಅನಾವರಣವಾಗಿಲಿ ಎಂದು ಹಾರೈಸಿದ್ದಾರೆ!
ಮದುವೆಯಾಗಿ ಆಗಲೇ ಒಂದು ವರ್ಷ ಕಳೆಯಿತು. ಇನ್ನು ರಾಕಿಂಗ್ ಸ್ಟಾರ್ ದಂಪತಿಗೆ ಇಂತಹ ಪ್ರಶ್ನೆ ಸಾಮಾನ್ಯ ಬಿಡಿ. ಆದರೆ ಸ್ವತಃ ಜಗ್ಗೇಶ್ ಬಾಯಿಯಿಂದಲೇ ಇಂತಹದ್ದೊಂದು ಮಾತು ಕೇಳಿ ಅಭಿಮಾನಿಗಳೂ ಧ್ವನಿಗೂಡಿಸಿದ್ದಾರೆ. ಇತ್ತೀಚೆಗೆ ಜಗ್ಗೇಶ್ ಕಿಚ್ಚ ಸುದೀಪ್ ಗೂ ಮತ್ತೊಂದು ಗಂಡು ಮಗುವಾಗಲಿ ಎಂದು ಆಶೀರ್ವಾದ ಮಾಡಿದ್ದನ್ನು ಮರೆಯುವಂತಿಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ