Publish Date: Sun, 31 Dec 2017 (09:45 IST)
Updated Date: Sun, 31 Dec 2017 (09:47 IST)
ಬೆಂಗಳೂರು: ಚಿತ್ರರಂಗದಲ್ಲಿ ಚಾಮಯ್ಯ ಮೇಸ್ಟ್ರು ಎಂದೇ ಗುರುತಿಸಿಕೊಂಡಿದ್ದ ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಸುದ್ದಿ ತಿಳಿದ ಜಗ್ಗೇಶ್ ಖೇದ ವ್ಯಕ್ತಪಡಿಸಿದ್ದಾರೆ.
ಹಿಂದೆಲ್ಲಾ ವರ್ಷಕ್ಕೆ 6 ಸಿನಿಮಾ ಮಾಡುತ್ತಿದ್ದೆ. ಆಗ ಅಶಕ್ತ ಕಲಾವಿದರಿಗೆ ಅವಕಾಶ ಕೊಟ್ಟು ನನ್ನ ಕೈಲಾದ ಸಹಾಯ ಮಾಡುತ್ತಿದ್ದೆ. ಈಗ ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಿದ್ದೇನೆ. ಹೆಚ್ಚು ಚಿತ್ರ ಮಾಡುತ್ತಿರುವವರು ಇಂತಹವರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಶಂಕರ್ ಅಶ್ವತ್ಥ್ ಕತೆ ಕೇಳಿ ಮನ ಒಡೆಯಿತು, ಮಾತು ನಿಂತಿತು. ನಮ್ಮವರನ್ನು ನಾನೇ ಶಪಿಸಿಕೊಂಡೆ! ನಾವೆಷ್ಟು ಸ್ವಾರ್ಥಿಗಳು! ನಾವು ಚೆನ್ನಾಗಿದ್ದರೆ ಸಾಕು, ಪರರ ಚಿಂತೆ ಏಕೆ ಎಂದು ಬಾಳುತ್ತಿದ್ದೇವೆ! ರಾಜಣ್ಣನ ಸಮಕ್ಕೆ ಹೆಜ್ಜೆ ಹಾಕಿದ ಕುಡಿಯ ಅದ್ಭುತ ಸ್ವಾಭಿಮಾನ! ತಲೆ ಮಾರು ಬದಲಾಗಿ ನೊಂದವರಿಗೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ