Publish Date: Sun, 17 Dec 2017 (08:33 IST)
Updated Date: Sun, 17 Dec 2017 (08:35 IST)
ಬೆಂಗಳೂರು: ಒಂದು ಕಾಲದಲ್ಲಿ ಮಾಲಾಶ್ರೀ ಜತೆಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ಸ್ಪುರದ್ರೂಪಿ ನಟ ಸುನಿಲ್ ನೆನಪಿರಬಹುದಲ್ಲವೇ? ಆ ನಟ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅಪಘಾತದಲ್ಲಿ ತೀರಿಕೊಂಡರು. ಆ ನಟನ ಬಗ್ಗೆ ಇದೀಗ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ.
ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಟ ಜಗ್ಗೇಶ್, ತಾನು ಮತ್ತು ಸುನಿಲ್ ಉತ್ತಮ ಸ್ನೇಹಿತರಾಗಿದ್ದೆವು. ನನ್ನದೇ ಬೈಕ್ ನಲ್ಲಿ ಕೂರಿಸಿಕೊಂಡು ಅವಕಾಶಕ್ಕಾಗಿ ಅಲೆಯುತ್ತಿದ್ದೆ ಎಂದು ಹಳೆಯದನ್ನು ನೆನಪಿಸಿಕೊಂಡಿದ್ದಾರೆ. ಆದರೆ ಅಷ್ಟು ಉತ್ತಮ ಸ್ನೇಹಿತರಾಗಿದ್ದ ಸುನಿಲ್ ಜತೆಗೆ ಜಗ್ಗೇಶ್ ಮಾತೇಬಿಟ್ಟರಂತೆ!
ಅದಕ್ಕೆ ಕಾರಣ, ಮಾಲಾಶ್ರೀ ಜತೆಗೆ ಪಾತ್ರ ಸಿಕ್ಕ ಮೇಲೆ ಸುನಿಲ್ ನನ್ನ ಸ್ನೇಹದಿಂದ ದೂರವಾದ. ಆತ ತುಂಬಾ ಬದಲಾದ. ಹೀಗಾಗಿ ಮಾತನಾಡುವುದೇ ಬಿಟ್ಟೆ. ಆದರೆ ಕೊನೆಗೊಂದು ದಿನ ಶಂಕರ್ ನಾಗ್ ರೀತಿ ಅಪಘಾತದಲ್ಲಿ ತೀರಿಕೊಂಡ. ಆದರೆ ಮೃದುಸ್ವಭಾವದ ಸುಂದರ ಹುಡುಗ ಎಂದು ಜಗ್ಗೇಶ್ ಹಳೆಯ ಗೆಳೆಯನನ್ನು ನೆನೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ