Publish Date: Mon, 30 Oct 2017 (10:00 IST)
Updated Date: Mon, 30 Oct 2017 (10:03 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಇದೀಗ ಹೊಸದೊಂದು ಇಮೇಜ್ ಕೊಡುವ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮುಂಬರುವ ಚಿತ್ರಕ್ಕಾಗಿ ಜಗ್ಗೇಶ್ ಹೊಸದೊಂದು ಸಾಹಸ ಮಾಡಿದ್ದಾರೆ.
ಜಗ್ಗೇಶ್ ಗನ್ ಹಿಡಿದುಕೊಂಡು ಪಕ್ಕಾ ಮಾಸ್ ಶೈಲಿಯಲ್ಲಿ ನಿಂತಿರುವ ‘8ಎಂಎಂ’ ಸಿನಿಮಾ ಪೋಸ್ಟರ್ ಗಳು ಈಗಾಗಲೇ ಕುತೂಹಲ ಹುಟ್ಟಿಸಿವೆ. ಇದೀಗ ಜಗ್ಗೇಶ್ ಈ ಸಿನಿಮಾದ ಹಾಡೊಂದಕ್ಕೆ ಸಾಹಿತ್ಯವನ್ನೂ ಬರೆದಿದ್ದಾರಂತೆ.
ಬದುಕು ಒಂದು ಯುದ್ಧ ಭೂಮಿ ಎಂದು ಆರಂಭವಾಗುವ ಸಾಲನ್ನು ಜಗ್ಗೇಶ್ ಬರೆದಿದ್ದಾರೆ. ‘ಇಷ್ಟು ದಿನ ಬೇರೆಯವರಿಗಾಗಿ ಪರಿಶ್ರಮಪಟ್ಟು ಎಲೆಮರೆಕಾಯಿಯ ಹಾಗಿದ್ದೆ. ಇನ್ನು ಮುಂದೆ ನನ್ನ ಶ್ರಮ ನನ್ನ ಫಲವಾಗಲಿ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಅಂದ ಹಾಗೆ ಈ ಹಾಡು ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ