Publish Date: Fri, 27 Oct 2017 (08:42 IST)
Updated Date: Fri, 27 Oct 2017 (08:44 IST)
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇದೀಗ ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟಕ್ಕೆ ವೇದಿಕೆಯಾಗಿದೆ. ರಾಷ್ಟ್ರಪತಿ ಭಾಷಣದಲ್ಲೂ ಟಿಪ್ಪು ಹೊಗಳಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಎಲ್ಲರೂ ಈ ವಿವಾದದ ಬಗ್ಗೆ ಒಂದೊಂದು ಮಾತನಾಡುತ್ತಿರಲು, ಅಭಿಮಾನಿಯೊಬ್ಬರು ಬಿಜೆಪಿ ನಾಯಕನೂ ಆಗಿರುವ ನವರಸನಾಯಕ ಜಗ್ಗೇಶ್ ಗೆ ಇದರ ಬಗ್ಗೆ ಅಭಿಪ್ರಾಯ ಹೇಳಿ ಎಂದು ಟ್ವಿಟರ್ ನಲ್ಲಿ ಕೋರಿದ್ದರು.
ಆದರೆ ಇದಕ್ಕೆ ಜಗ್ಗೇಶ್ ಪರೋಕ್ಷವಾಗಿ ಪ್ರತಿಕ್ರಿಯಿಸಲು ಇಷ್ಟವಿಲ್ಲ ಎಂದು ಬಿಟ್ಟಿದ್ದಾರೆ. ‘ಟಿಪ್ಪು ಇತಿಹಾಸದ ಬಗ್ಗೆ ಅನೇಕ ಗ್ರಂಥಗಳಿವೆ. ಸಮಯ ಮಾಡಿಕೊಂಡು ಇತಿಹಾಸ ಓದಿ. ಸತ್ಯ, ಅಸತ್ಯ ಘಟನೆಗಳು ಅರಿವಾಗುತ್ತವೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ