Select Your Language

Notifications

webdunia
webdunia
webdunia
webdunia

ಪುಸ್ತಕದ ಜತೆ ಫೋಟೊ… ಮತ್ತೆ ಟ್ರೋಲ್ ಗೆ ಸಿಲುಕಿದ ಟ್ವಿಂಕಲ್ ಖನ್ನಾ

twinkle khanna
ಮುಂಬೈ , ಗುರುವಾರ, 26 ಅಕ್ಟೋಬರ್ 2017 (17:43 IST)
ಮುಂಬೈ: ನಟ ಅಕ್ಷಯ್ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ ಮತ್ತೆ ಟ್ರೋಲ್‌ಗೆ ಸಿಲುಕಿದ್ದಾರೆ. ಇತ್ತೀಚೆಗೆ ಟ್ವಿಟರ್ ನಲ್ಲಿ ಶೇರ್‌ ಮಾಡಿದ್ದ ಫೋಟೊ ಈಗ ಟೀಕಾಕಾರರಿಗೆ ಆಹಾರವಾಗಿದೆ.

ಟ್ವಿಂಕಲ್ ಶೇರ್ ಮಾಡಿದ್ದ ಫೋಟೊದಲ್ಲಿ ಆಕೆ ಪುಸ್ತಕಗಳ ಮೇಲೆ ಕುಳಿತಿದ್ದು, ತಮ್ಮ ಕಾಲನ್ನು ಸ್ಟೂಲ್‌ ಮೇಲೆ ಇರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊ ವೈರಲ್‌ ಆಗಿದೆ. ಪುಸ್ತಕಗಳ ಮೇಲೆ ಕುಳಿತು ಫೋಸ್‌ ನೀಡಿರುವುದು ಕೆಲವರ ಕಣ್ಣುಗಳು ಕೆಂಪಾಗಿಸಿದೆ. ಟ್ವಿಂಕಲ್ ಖನ್ನಾ ವಿರುದ್ಧ ವಾಗ್ದಾಳಿ ನಡೆಸಿರುವ ಜನರು, ಟ್ವಿಂಕಲ್‌ ನಡೆಯನ್ನು ಖಂಡಿಸಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಉತ್ತರ ನೀಡಿರುವ ಟ್ವಿಂಕಲ್‌, ನನ್ನ ಕಾಲು ಸ್ಟೂಲ್‌ ಮೇಲಿದೆ. ಪುಸ್ತಕಗಳ ಮೇಲೆ ಕಾಲಿಟ್ಟು ಧೂಳು ಮಾಡುವುದು ನನಗಿಷ್ಟವಿಲ್ಲ. ಪುಸ್ತಕಗಳ ಮೇಲೆ ಮಲಗಲು, ಬಾತ್‌ರೂಮ್‌ನಲ್ಲಿ ಓದಲು ನಂಗೆ ಯಾವುದೇ ಹಿಂಜರಿಕೆಯಿಲ್ಲ. ಶ್ರದ್ಧೆಯಿಂದ ಪುಸ್ತಕಗಳನ್ನು ಓದಿದ್ರೆ ನಾಲೆಡ್ಜ್  ಬರುತ್ತೆ. ಹೊರತು ಅವುಗಳನ್ನು ಪೂಜಿಸುವುದರಿಂದಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ನಟಿ ಪೂಜಾ ಗಾಂಧಿಗೆ ನ್ಯಾಯಾಲಯ ಶಿಕ್ಷೆ