Publish Date: Tue, 05 Dec 2017 (08:42 IST)
Updated Date: Tue, 05 Dec 2017 (08:44 IST)
ಬೆಂಗಳೂರು: ಹನುಮ ಜಯಂತಿ ಆಚರಣೆ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಖಡಕ್ ಸಂದೇಶ ರವಾನಿಸಿದ್ದಾರೆ.
ದೀಪ ಆರುವುದಕ್ಕೆ ಮೊದಲು ಜೋರಾಗಿಯೇ ಉರಿಯುತ್ತದೆ. ಹಾಗಂದರೆ ಅದರ ಅಂತ್ಯ ಹತ್ತಿರ ಬಂದಿದೆ ಎಂದೇ ಅರ್ಥ. ವೋಟಿಗೆ ನೂರು ದಾರಿ ಹಿಡಿದರೆ ಅದು ರಾಜತಂತ್ರ. ಆದರೆ ಧರ್ಮ ತುಳಿದು ವೋಟಿನ ಹಿಂದೆ ಹೋಗುತ್ತಿರುವುದು ಯಾವ ಪುರುಷಾರ್ಥಕ್ಕೆ? ಈ ಗುಣ ನಿಮಗೆ ತಿರುಗುಬಾಣವಾಗಲಿದೆ.
ಉಳಿದ ಕೆಲ ತಿಂಗಳು ನಡೆಯಲಿದೆ ನಿಮ್ಮ ಕಾರುಬಾರು. ಜನರು ಪ್ರತಿತಂತ್ರಕ್ಕೆ ತಯಾರಾಗುತ್ತಿದ್ದಾರೆ. ಉಳಿದ ಸಮಯಕ್ಕೆ ಶುಭಮಸ್ತು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಪ್ರತಾಪ ಸಿಂಹ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ