Publish Date: Sun, 17 Dec 2017 (07:46 IST)
Updated Date: Sun, 17 Dec 2017 (07:51 IST)
ಬೆಂಗಳೂರು: ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಂಭತ್ತು ವಾರಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ವಾರ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಪೂರ್ಣವಿರಾಮವಿಟ್ಟಿದ್ದಾರೆ.
ಈ ವಾರ ಎಲಿಮಿನೇಷನ್ ಲಿಸ್ಟ್ ನಲ್ಲಿ ಚಂದನ್, ಜಗನ್, ಸಮೀರ್ ಆಚಾರ್ಯ, ಜಯಶ್ರೀನಿವಾಸನ್, ಶ್ರುತಿ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ಆದರೆ ಈ ವಾರ ಮನೆಯಿಂದ ಹೊರಗೆ ಬಂದಿದ್ದು ಸೆಲೆಬ್ರಿಟಿಯಾಗಿ ಮನೆಯೊಳಗೆ ಬಂದ ಜಗನ್ ಅವರು. ಮನೆಯವರು ಇವರನ್ನು ಕಣ್ಣೀರಿಡುತ್ತಾ ಮನೆಯಿಂದ ಹೊರಗೆ ಕಳುಹಿಸಿದರು. ಆದರೆ ಜಗನ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಬರುವುದಿಲ್ಲ, ಬದಲಾಗಿ ಅವರನ್ನು ಸಿಕ್ರೇಟ್ ರೂಮಿಗೆ ಕಳುಹಿಸಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ