Publish Date: Fri, 03 Nov 2017 (08:43 IST)
Updated Date: Fri, 03 Nov 2017 (08:44 IST)
ಬೆಂಗಳೂರು: ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಭಾರೀ ಒತ್ತಾಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಟ ಜಗ್ಗೇಶ್ ಕೂಡಾ ಧ್ವನಿಗೂಡಿಸಿದ್ದಾರೆ.
ತುಳು ನಾಡ ಸಹೋದರರು ಎಷ್ಟೇ ಬೆಳೆದರೂ ಯಾವುದೇ ದೇಶದಲ್ಲಿದ್ದರೂ ತಮ್ಮ ಮಾತೃಭಾಷೆ ಬಳಸುತ್ತಾರೆ. ಅದಕ್ಕೇ ತುಳು ಭಾಷೆ ಬೆಳೆದಿರೋದು. 8 ನೇ ಪರಿಚ್ಛೇದಕ್ಕೆ ಸೇರಲಿ ಸನಾತನ ಭಾಷೆ ಎಂದೇ ನನ್ನ ಹಾರೈಕೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳ ನಿಷೇಧದ ಬಗ್ಗೆ ಪ್ರಸ್ತಾವನೆ ಬಂದಾಗಲೂ ನಟ ಜಗ್ಗೇಶ್ ನಿಷೇಧಿಸದಂತೆ ಧ್ವನಿ ಎತ್ತಿದ್ದರು. ಇದೀಗ ತುಳು ಭಾಷೆ ಬಗ್ಗೆ ತಮ್ಮ ಅಭಿಮಾನ ಮೆರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ