Publish Date: Wed, 01 Nov 2017 (08:24 IST)
Updated Date: Wed, 01 Nov 2017 (08:26 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಸಿನಿಮಾ ಲೋಕದ ಮಂದಿಯೂ ಚುರುಕಾಗಿದ್ದಾರೆ. ಉಪೇಂದ್ರ ಹೊಸ ಪಕ್ಷ ಸ್ಥಾಪಿಸುತ್ತಿದ್ದರೆ, ಅಂಬರೀಷ್ ಪುತ್ರ ಚುನಾವಣೆ ಕಣಕ್ಕಿಳಿಯುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಇದೀಗ ನವರಸನಾಯಕ ಜಗ್ಗೇಶ್ ಸರದಿ. ಬಿಜೆಪಿ ಪಕ್ಷದಲ್ಲಿರುವ ಜಗ್ಗೇಶ್ ಹಿಂದೊಮ್ಮೆ ಎಂಎಲ್ ಸಿಯಾದವರು. ಈ ಬಾರಿ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುತ್ತಾ? ಈ ಬಗ್ಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ್ದಾರೆ ಜಗ್ಗೇಶ್.
‘ಯೋಗವಿದ್ದಾಗ ಬೇಕಾದ್ದು ನಮ್ಮ ಹುಡುಕಿ ಬರುತ್ತದೆ! 35 ವರ್ಷದ ಹಿಂದೆ 100 ರೂಪಾಯಿ ಸಿಕ್ಕರೆ ಸಾಕು ಎನ್ನುತ್ತಿದ್ದೆ. ರಾಯರ ದಯೆಯಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾಳೆ ದೇವರದಯೆ’ ಎಂದಿದ್ದಾರೆ. ಅಲ್ಲಿಗೆ ಟಿಕೆಟ್ ಸಿಕ್ಕರೆ ತಾವೂ ಸ್ಪರ್ಧೆಗೆ ರೆಡಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ