Select Your Language

Notifications

webdunia
webdunia
webdunia
Friday, 11 April 2025
webdunia

ಆಧಾರದಿಂದ ದೇಶದ ಭದ್ರತೆಗೆ ಬೆದರಿಕೆ: ಮೋದಿಗೆ ಸುಬ್ರಹ್ಮಣ್ಯಂ ಸ್ವಾಮಿ ಟಾಂಗ್

ಸುಬ್ರಹ್ಮಣ್ಯಂ ಸ್ವಾಮಿ
ನವದೆಹಲಿ , ಮಂಗಳವಾರ, 31 ಅಕ್ಟೋಬರ್ 2017 (12:20 IST)
ದೇಶಾದ್ಯಂತ ಆಧಾರ ಕಡ್ಡಾಯಗೊಳಿಸಿರುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಸುಪ್ರೀಂಕೋರ್ಟ್‌‌ನ ವಿಸ್ತೃತ ಪೀಠ ಆಧಾರ ಕಡ್ಡಾಯಗೊಳಿಸಿರುವ ಬಗ್ಗೆ ಸೂಕ್ತ ತೀರ್ಪು ನೀಡುವ ವಿಶ್ವಾಸವಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
  
ಫೈರ್‌‍ಬ್ರ್ಯಾಂಡ್‌ ಬಿಜೆಪಿ ನಾಯಕರಾದ ಸ್ವಾಮಿ, ಆಧಾರ ಕಡ್ಡಾಯ.ಗೊಳಿಸುವುದರಿಂದ ಯಾವ ರೀತಿ ದೇಶದ ಭದ್ರತೆಗೆ ಧಕ್ಕೆಯಾಗಲಿದೆ ಎನ್ನುವ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
 
ಸರಕಾರಿ ವಿವಿಧ ಸೇವೆಗಳ ಮತ್ತು ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಆಧಾರ್ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್, ಐದು ನ್ಯಾಯಾಧೀಶರ ಸಂವಿಧಾನ ಪೀಠವನ್ನು ರಚಿಸಿದೆ ಎಂದು ತಿಳಿಸಿದ್ದಾರೆ. 
 
ಆಧಾರ್ ಕಾನೂನು ಜಾರಿಗೊಳಿಸುವಿಕೆಗೆ ಗುರಿಯಾಗಿರುವ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶ ದಿಪಕ್ ಮಿಶ್ರಾ, ಜಸ್ಟಿಸ್ ಎಂಎಂ ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂದ್ ಅವರು ಒಳಗೊಂಡಂತೆ ಸುಪ್ರೀಂ ಕೋರ್ಟ್ ಬೆಂಚ್ ಅಂಗೀಕಾರ ನೀಡಿದೆ.
 
ಆಧಾರ ಕಡ್ಡಾಯಗೊಳಿಸುವಿಕೆಯಿಂದ ಗೌಪ್ಯತೆಯ ಹಕ್ಕು ಉಲ್ಲಂಘಿಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ಆದೇಶದ ವಿರುದ್ಧ ಹಲವರು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ನನ್ನ ಕಂಡ್ರೆ ಭಯ: ಸಿಎಂ ಸಿದ್ದರಾಮಯ್ಯ