Select Your Language

Notifications

webdunia
webdunia
webdunia
webdunia

2019ರ ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಕಣಕ್ಕೆ

2019ರ ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಕಣಕ್ಕೆ
ನವದೆಹಲಿ: , ಮಂಗಳವಾರ, 31 ಅಕ್ಟೋಬರ್ 2017 (14:12 IST)
ಲೋಕಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷಗಳು ದೂರವಿದೆ. ಆದರೆ, ಈಗಾಗಲೇ ಬಿಹಾರ್‌ದಲ್ಲಿರುವ ಎಡಪಕ್ಷ, ಬೇಗುಸರಾಯಿ ಲೋಕಸಭಾ ಕ್ಷೇತ್ರದಿಂದ ದೆಹಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಕನ್ಹಯ್ಯಾ ಕುಮಾರ್‌ನನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 
ಸಿಪಿಐ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೆ.ಆರ್.ನರೈನಾ, ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಸಿಪಿಐ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 
ಎಡಪಕ್ಷಗಳ ನಾಯಕರು ಕನ್ಹಯ್ಯಾ ಕುಮಾರ್‌ರನ್ನು ಕೇರಳದಿಂದ ಸ್ಪರ್ಧಿಸಬೇಕು ಎಂದು ಬಯಸಿದ್ದಾರೆ. ಆದರೆ, ಬಿಹಾರ್ ಘಟಕ ಮಾತ್ರ ಕನ್ಹಯ್ಯಾ ಕುಮಾರ್ ಮೊದಲ ಬಾರಿಗೆ ತವರಿನಲ್ಲಿ ಸ್ಪರ್ಧಿಸುವುದರಿಂದ ಗೆಲುವು ಖಚಿತವಾಗುತ್ತದೆ ಎಂದು ಭಾವಿಸಿದೆ ಎಂದು ಮಾಹಿತಿ ನೀಡಿದ್ದಾರೆ. 
 
ಕನ್ಹಯ್ಯಾ ಕುಮಾರ್ ಚುನಾವಣಾ ರಾಜಕೀಯದಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರಬಹುದು. ಆದರೆ 30 ವರ್ಷ ವಯಸ್ಸಿನ ಎಡಪಂಥೀಯ ನಾಯಕ ಕಳೆದ ವರ್ಷದ ಜೆಎನ್‌ಯು ವಿವಾದದ ನಂತರ ದೇಶಾದ್ಯಂತ ಹೆಚ್ಚು ಚಿರಪರಿಚಿತರಾಗಿದ್ದಾರೆ ಎಂದು ಎಡಪಕ್ಷಗಳ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ ಅಪಹರಿಸಿ 4 ತಿಂಗಳುಗಳವರೆಗೆ ಅತ್ಯಾಚಾರ