Select Your Language

Notifications

webdunia
webdunia
webdunia
webdunia

ಆರೆಸ್ಸೆಸ್‌, ಉಗ್ರಗಾಮಿ ಸಂಘಟನೆ ಐಎಸ್‌ಐಎಸ್‌ನಂತೆ: ಕನ್ಹಯ್ಯಾ ಕುಮಾರ್

ಆರೆಸ್ಸೆಸ್‌, ಉಗ್ರಗಾಮಿ ಸಂಘಟನೆ ಐಎಸ್‌ಐಎಸ್‌ನಂತೆ: ಕನ್ಹಯ್ಯಾ ಕುಮಾರ್
ನವದೆಹಲಿ , ಸೋಮವಾರ, 5 ಜೂನ್ 2017 (15:01 IST)
ಆರೆಸ್ಸೆಸ್ ಐಎಸ್‌ಐಎಸ್‌ನಂತೆ ವರ್ತಿಸುತ್ತಿದೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜೆಎನ್‌ಯು ವಿಶ್ವವಿದ್ಯಾಲಯವನ್ನು ಪಂಚಿಂಗ್ ಬ್ಯಾಗ್‌ನಂತೆ ಮಾಡಲಾಗಿದೆ. ವಿಶ್ವವಿದ್ಯಾಲಯವನ್ನು ಸರಕಾರದ ಶತ್ರುವಿನಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ದೇಶಭಕ್ತ ಸಂಘಟನೆ ಎಂದು ಬಿಂಬಿಸಲಾಗಿರುವ ಆರೆಸ್ಸೆಸ್, ತನ್ನ ನೀತಿ ನಿಯಮಗಳನ್ನು ಪಾಲಿಸುವಂತೆ ದೇಶದ ಜನತೆಯ ಮೇಲೆ ಒತ್ತಡ ಹೇರುತ್ತಿದೆ. ಆರೆಸ್ಸೆಸ್ ನೀತಿಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂದು ಆರೋಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಜಾಗತಿಕ ಉಗ್ರಗಾಮಿ ಸಂಘಟನೆಯಾದ ಐಸಿಸ್‌ ಕೂಡಾ ತನ್ನದೇ ಉದ್ದೇಶಗಳನ್ನು ಜನರ ಮೇಲೆ ಹೇರಲು ಯತ್ನಿಸುತ್ತಿದೆ. ಆದರಂತೆ ಆರೆಸ್ಸೆಸ್ ಕೂಡಾ ಇಂತಹದೆ ವರ್ತನೆ ತೋರುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಧ ನಾಯಕ ಕನ್ಹಯ್ಯಾ ಕುಮಾರ್ ಗುಡುಗಿದ್ದಾರೆ.  

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲಿಗೆ ಕಂಗೆಟ್ಟ ಕುದುರೆಯೊಂದು ಜೈಪುರದಲ್ಲಿ ಏನು ಮಾಡಿದೆ ನೋಡಿ..