Publish Date: Mon, 05 Jun 2017 (14:49 IST)
Updated Date: Mon, 05 Jun 2017 (16:51 IST)
ಜೈಪುರ:ಬಿಸಿಲಧಗೆಯಿಂದ ಕಂಗೆಟ್ಟುಹೋಗಿರುವ ಕುದುರೆಯೊಂದು ದಿಕ್ಕೆಟ್ಟು ಓಡಿ ಕೊನೆಗೆ ಕಾರಿನ ಮೇಲೆ ಜಂಪ್ ಮಾಡಿ, ಮುಂದಿನ ಗ್ಲಾಸ್ ಒಡೆದು ಒಳಗೆ ನುಗ್ಗಿದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಟಾಂಗಾ ವಾಲಾ ಕಟ್ಟಿದ್ದ ಕುದುರೆಯೊಂದು ಮಧ್ನಾಹ್ನ ಸುಡು ಬಿಸಿಲಿಗೆ ಹೈರಾಣಾಗಿ, ತಾಪಮಾನ ತಾಳದೆ ದಿಕ್ಕೆಟ್ಟು ಓಡಲಾರಂಭಿಸಿದೆ. ಈ ವೇಳೆ ರಸ್ತೆಯಲ್ಲಿನ ಬೈಕ್‌ಗಳಿಗೆ ಕುದುರೆ ಡಿಕ್ಕಿ ಹೊಡೆದು ಬಳಿಕ ಬರುತ್ತಿದ್ದ ಕಾರಿನ ಮೇಲೆ ಜಂಪ್ ಮಾಡಿದೆ. ಪರಿಣಾಮ ಕಾರಿನ ಮುಂದಿನ ಗ್ಲಾಸ್ ಒಡೆದು ಕುದುರೆ ಕಾರೊಳಗೆ ನುಗ್ಗಿದೆ.
ಸಧ್ಯ ಸ್ಥಳೀಯರು ಕಾರೊಳಗೆ ಸಿಲುಕಿದ್ದ ಕುದುರೆಯನ್ನು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಪಂಕಜ್ ಜೋಶಿಗೆ ಗಾಯಗಳಾಗಿವೆ. ಕುದುರೆಯೂ ಗಾಯಗೊಂಡಿದೆ. ಬಿಸಿಲ ಝಳ ಮನುಷ್ಯನನ್ನೇ ಬಸವಳಿಯುವಂತೆ ಮಾಡಿದೆ. ಇನ್ನು ಮೂಕಪ್ರಾಣಿಗಳ ವೇದನೆ ದೇವರಿಗೆ ಪ್ರೀತಿ.