Publish Date: Mon, 05 Jun 2017 (13:39 IST)
Updated Date: Mon, 05 Jun 2017 (16:45 IST)
ಬೇರೆ ಪಕ್ಷದಿಂದ ಬರೋರು ಕೇವಲ ಅಧಿಕಾರಕ್ಕಾಗಿ ಬರ್ತಾರೆ ಎಂದು ಪಕ್ಷಾಂತರಿಗಳ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ವಿಧಾನಪರಿಷತ್‌ನ ಅಧಿವೇಶನದಲ್ಲಿ ವಿಮಲಾಗೌಡರಿಗೆ ಶೃದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರ ವಿರುದ್ಧವೇ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡು ಘಟನೆ ನಡೆಯಿತು.
ಅಂದು ನಾನು ರಾಜಕೀಯಕ್ಕೆ ಪ್ರವೇಶಿಸಿದಾಗ ಹಿರಿಯ ನಾಯಕಿ ವಿಮಲಾಗೌಡ ನನ್ನ ವಿರುದ್ಧ ಸೋಲನುಭವಿಸಿದ್ದರು. ಅವರಿಗೆ ಧೈರ್ಯದಿಂದಿರುವಂತೆ ಹೇಳಲು ಅವರ ಮನೆಗೆ ತೆರಳಿದ್ದೆ. ಆಗ ಅವರು ನಾನು ಸೋತಿದ್ದರಿಂದ ಬೇಜಾರಾಗಿಲ್ಲ. ಆದರೆ, ನಮ್ಮವರೇ ನನ್ನನ್ನು ಸೋಲಿಸಿರುವುದು ನೋವು ತಂದಿದೆ ಎಂದು ಹೇಳಿದ್ದರು.
ಇಂದು ಕೂಡಾ ಅಷ್ಟೆ ಬೇರೆಯವರು ಪಕ್ಷ ಸೇರ್ಪಡೆಯಾಗಲು ಬರುವುದು ಪಕ್ಷ ಕಟ್ಟುವುದಕ್ಕಲ್ಲ. ಕೇವಲ ಅಧಿಕಾರ ಅನುಭವಿಸಲು ಮಾತ್ರ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಪಕ್ಷದಲ್ಲಿನ ವಿರೋಧಿಗಳ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.