Publish Date: Fri, 18 Aug 2017 (09:49 IST)
Updated Date: Fri, 18 Aug 2017 (09:52 IST)
ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ಶುರು ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಪ್ರತ್ಯೇಕ ಸಮಾಲೋಚನೆ ಸಭೆ ನಡೆಸಿದೆ.
ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಿನ್ನೆ ದೆಹಲಿಯಲ್ಲಿ ಸಭೆ ಸೇರಿತ್ತು. ಈ ವೇಳೆ ಅಮಿತ್ ಶಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಸರಿಯೇ 360 ಸೀಟು ಗೆಲ್ಲಲು ಗುರಿ ನಿಗದಿಪಡಿಸಿದ್ದಾರೆ.
ಕಾಂಗ್ರೆಸ್ ತನ್ನ 17 ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದ ಬೆನ್ನಲ್ಲೇ ಬಿಜೆಪಿಯೂ ಸಭೆ ನಡೆಸಿದ್ದು. ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಚುರುಕು ಮುಟ್ಟಿಸಿದೆ. ಕಳೆದ ಬಾರಿ ಸೋತ ಸ್ಥಾನಗಳ ಮೇಲೆ ವಿಶೇಷವಾಗಿ ಗಮನ ಹರಿಸುವಂತೆ ನಾಯಕರಿಗೆ ಸೂಚಿಸಿದ್ದಾರೆ.
ಕರ್ನಾಟಕ, ಪ. ಬಂಗಾಲ, ಒಡಿಶಾ ಸೇರಿದಂತೆ ಬಿಜೆಪಿ ಬಲ ಇಲ್ಲದ ಕಡೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡುವಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.