Publish Date: Fri, 18 Aug 2017 (09:19 IST)
Updated Date: Fri, 18 Aug 2017 (09:22 IST)
ಬೀಜಿಂಗ್: ಡೋಕ್ಲಾಂ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೆ, ಇತ್ತ ಚೀನಾ ಮಾಧ್ಯಮಗಳು ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಚೀನಾದ ಸರ್ಕಾರಿ ಸಾಮ್ಯದ ಮಾಧ್ಯಮ ಸಭ್ಯತೆ ಮೀರಿ ಭಾರತೀಯ ಬಗ್ಗೆ ಅವಹೇಳನಕಾರಿಯಾಗಿ ವರದಿ ಪ್ರಸಾರ ಮಾಡಿದೆ. ಭಾರತೀಯರನ್ನು ಅಣಕ ಮಾಡುವಂತಹ ವಿಡಿಯೋವನ್ನು ಬಿಡುಗಡೆಗೊಳಿಸಿದೆ.
ಸಿಖ್ ಪೇಟ ಧರಿಸಿದ ಭಾರತೀಯ ವೇಷಧಾರಿಯೊಬ್ಬ ಚೀನೀ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ. ಏಳು ಪಾಪಗಳು (ಸೆವೆನ್ ಸಿನ್ಸ್) ಹೆಸರಿನಲ್ಲಿ ಇದನ್ನು ಪ್ರಸಾರ ಮಾಡಲಾಗಿದೆ.