Select Your Language

Notifications

webdunia
webdunia
webdunia
webdunia

ಭಾರತದ ಗಡಿಯೊಳಕ್ಕೆ ನುಗ್ಗಿದ ಚೀನಾ ಸೇನೆ

ಭಾರತದ ಗಡಿಯೊಳಕ್ಕೆ ನುಗ್ಗಿದ ಚೀನಾ ಸೇನೆ
ನವದೆಹಲಿ , ಬುಧವಾರ, 16 ಆಗಸ್ಟ್ 2017 (09:09 IST)
ನವದೆಹಲಿ: ಡೋಕ್ಲಾಂನಲ್ಲಿ ಭಾರತ ತನ್ನ ಗಡಿಯೊಳಗೆ ನುಗ್ಗಿದೆ ಎಂದು ಬೊಬ್ಬಿರಿಯುತ್ತಿರುವ ಚೀನಾ ಇದೀಗ ಲಡಾಕ್ ಪ್ರದೇಶದಲ್ಲಿ ಭಾರತೀಯ ಗಡಿಯೊಳಗೆ ಅತಿಕ್ರಮಿಸಲು ಯತ್ನಿಸಿದೆ.

 
ಆದರೆ ಭಾರತೀಯ  ಯೋಧರು ಚೀನಾ ಲಿಬರೇಷನ್ ಆರ್ಮಿಯ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಲಡಾಕ್ ನ ಪಂಗೋಂಗ್ ಸರೋವರದ ಬಳಿ ಗಡಿ ದಾಟಲು ಯತ್ನಿಸಿದಾಗ ಚೀನಾ ಮತ್ತು ಭಾರತೀಯ ಯೋಧರ ನಡುವೆ ತಳ್ಳಾಟ ನಡೆದಿದೆ ಎನ್ನಲಾಗಿದೆ.

ಚೀನಾ ಯೋಧರು ಕಬ್ಬಿಣದ ರಾಡ್ ಗಳು, ಕಲ್ಲು ಹೊತ್ತು ತಂದಿದ್ದರು. ಉಭಯ ಸೈನಿಕರ ನಡುವೆ ತಳ್ಳಾಟ ನಡೆದಿದ್ದರಿಂದ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸೇನಾ ಮೂಲಗಳು ಹೇಳಿವೆ. ಸುಮಾರು ಅರ್ಧಗಂಟೆಗಳ ಕಾಲ ಈ ಸಂಘರ್ಷ ನಡೆದಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂದು ನಡೆಯಲಿರುವ ದ್ವಜ ಸಭೆಯಲ್ಲಿ ಭಾರತ ಈ ವಿಚಾರವನ್ನು ಪ್ರಸ್ತಾಪಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ.. ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ಸವಿಯಲಿರುವ ರಾಹುಲ್ ಗಾಂಧಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ಸವಿಯಲಿರುವ ರಾಹುಲ್ ಗಾಂಧಿ