Publish Date: Mon, 14 Aug 2017 (09:03 IST)
Updated Date: Mon, 14 Aug 2017 (09:06 IST)
ನವದೆಹಲಿ: ಭಾರತದೊಂದಿಗಿನ ಸ್ನೇಹ ಹಸ್ತವನ್ನು ಮತ್ತಷ್ಟು ವಿಸ್ತರಿಸುವ ದೊಡ್ಡಣ್ಣ ಅಮೆರಿಕಾ ಭಾರತೀಯ ಸೇನೆಯ ಆಧುನೀಕರಣಕ್ಕೆ ಸಹಾಯ ಮಾಡಲು ಮುಂದಾಗಿದೆ.
ಅಮೆರಿಕಾದ ಸೇನೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಭರವಸೆ ನೀಡಿದ್ದಾರೆ. ಉಭಯ ದೇಶಗಳೂ ಕೈ ಜೋಡಿಸಿದರೆ ಸೇನೆ ಮತ್ತಷ್ಟು ಆಧುನೀಕರಣಕ್ಕೊಳಗಾಗಲಿದೆ ಎಂದು ಸೇನಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೀನಾ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ವಿಚಾರದಲ್ಲೂ ಭಾರತಕ್ಕೆ ಅಮೆರಿಕಾ ಅಭಯ ನೀಡಿತ್ತು. ಕೆಲವು ಆಧುನಿಕ ಶಸ್ತ್ರಾಸ್ತ್ರಗಳು, ವಾಹನಗಳ ಖರೀದಿಗೆ ಅಮೆರಿಕಾ ಸಹಾಯ ಮಾಡಲು ಸಿದ್ಧ ಎಂದು ಅಧಿಕಾರಿಗಳು ತಿಳಿಸಿದ್ದಾರೆ.