Publish Date: Fri, 18 Aug 2017 (09:08 IST)
Updated Date: Fri, 18 Aug 2017 (09:10 IST)
ಬೀಜಿಂಗ್: ಡೋಕ್ಲಾಂ ಗಡಿಯಿಂದ ಸೇನೆ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಚೀನಾ ಅಂತಿಮ ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾ ಈ ಬಗ್ಗೆ ಭಾರತಕ್ಕೆ ಕಡೇ ಎಚ್ಚರಕೆ ನೀಡಲಿದೆ. ನಿಗದಿತ ದಿನದೊಳಗೆ ಸೇನೆ ಹಿಂಪಡೆಯದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಭಾರತವೇ ಹೊಣೆಯಾದೀತು ಎಂದು ಚೀನಾ ಎಚ್ಚರಿಕೆ ನೀಡಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ.
ಚೀನಾದ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಆಧರಿಸಿ ಚೀನಾದ ಮಾಧ್ಯಮ ಈ ವರದಿ ಮಾಡಿದೆ. ಭಾರತ ಮತ್ತು ಚೀನಾ ಗಡಿ ವಿವಾದದ ವಿಚಾರದಲ್ಲಿ ಚೀನಾ ಮಾಧ್ಯಮಗಳೇ ಎಲ್ಲರಿಗಿಂತ ಹೆಚ್ಚು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಯತ್ನ ನಡೆಸುತ್ತಿದೆ.