Publish Date: Thu, 02 Nov 2017 (08:48 IST)
Updated Date: Thu, 02 Nov 2017 (08:49 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಇಂದು ತಮ್ಮ ಬಹುಕಾಲದ ಗೆಳತಿ ಸಾಹಿತ್ಯ ಜತೆ ವಿವಾಹವಾಗಿದ್ದಾರೆ.
ಬನಶಂಕರಿಯಲ್ಲಿ ಇಂದು ಬೆಳಗಿನ ಜಾವದ ಮುಹೂರ್ತದಲ್ಲಿ ಬಾಲ್ಯದ ಗೆಳತಿ ಸಾಹಿತ್ಯ ಜತೆ ಯೋಗಿ ಸಪ್ತಪದಿ ತುಳಿದಿದ್ದಾರೆ. ನಟ ಯೋಗಿ ಮತ್ತು ಸಾಫ್ಟ್ ವೇರ್ ಉದ್ಯೋಗಿ ಸಾಹಿತ್ಯ ಪರಸ್ಪರ ಪ್ರೀತಿಸುತ್ತಿದ್ದರು.
ಆರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋರಿ ಇಂದು ಹಿರಿಯರ ಸಮ್ಮುಖದಲ್ಲಿ ಸತಿ ಪತಿಗಳಾದರು. ಸರಳವಾಗಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಇಬ್ಬರ ಕುಟುಂಬದ ಆಪ್ತೇಷ್ಟರು ಭಾಗವಹಿಸಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ