Publish Date: Sun, 31 Dec 2017 (08:38 IST)
Updated Date: Sun, 31 Dec 2017 (08:44 IST)
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ.
ಈ ವಾರ ಕೃಷಿ, ನಿವೇದಿತಾ ಗೌಡ ಹಾಗು ದಿವಾಕರ್ ಅವರು ಎಲಿಮಿನೇಶನ್ ಗೆ ನಾಮಿನೇಟ್ ಆಗಿದ್ದು ಈ ಮೂವರಲ್ಲಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿತ್ತು. ಆದರೆ ಕಾಮನ್ ಮ್ಯಾನ್ ಕಡೆಯಿಂದ ಬಂದ ದಿವಾಕರ್ ಅವರು ಮನೆಯಿಂದ ಹೊರಗೆ ಬಂದಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ. ಇಲ್ಲಿ ತನಕ ಸೇಫಾಗಿದ್ದ ದಿವಾಕರ್ ಅವರು ಮನೆಯಲ್ಲಿ ಉತ್ತಮ ಪ್ರತಿಸ್ಪರ್ಧಿ ಎನಿಸಿಕೊಂಡಿದ್ದರು.
ಹಾಗೆ ಬಿಗ್ ಬಾಸ್ ನಲ್ಲಿ ಎಲಿಮಿನೆಟ್ ಆದ ಇನ್ನೊಬ್ಬ ಸ್ಪರ್ಧಿ ಜಯ್ ಶ್ರೀನಿವಾಸನ್ ಅವರು. ಇವರು ಸಿಕ್ರೇಟ್ ರೂಂನಲ್ಲಿದ್ದು, ಅಲ್ಲಿಂದಲೇ ಅವರನ್ನು ಹೊರಕಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ