Publish Date: Fri, 22 Dec 2017 (08:47 IST)
Updated Date: Fri, 22 Dec 2017 (08:50 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ ನಟಿ ಸಂಯುಕ್ತಾ ಹೆಗಡೆ ಮೇಲೆ ನಟ ಜಗ್ಗೇಶ್ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ, ತೀಕ್ಷ್ಣವಾಗಿ ಸಂಯುಕ್ತಾ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸಂಯುಕ್ತಾ ನೋಡಿ ನನಗೆ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದಂಗೆ ಎನ್ನುವ ಗಾದೆ ನೆನಪಾಯಿತು ಎಂದಿದ್ದಾರೆ. ಅಷ್ಟೇ ಅಲ್ಲದೆ, ಸಂಯುಕ್ತಾರನ್ನು ಅರ್ಧ ಬೆಂದ ಮಡಕೆ ಎಂದಿದ್ದಾರೆ.
ಆಚಾರ್ಯರಂತಹ ತಾಳ್ಮೆಯ ಗುಣದ ವ್ಯಕ್ತಿಯ ಮೇಲೆ ಕೈ ಮಾಡಿದ ಈಕೆ ಕ್ಷಮಗೆ ಅನರ್ಹ. ಸ್ತ್ರೀ ಕುಲಕ್ಕೆ ಈಕೆ ಕಳಂಕ. ಭವಿಷ್ಯ ಬೆಳೆದ ವಾತಾವರಣ ಸರಿಯಿಲ್ಲ ಎಂದು ಕಠೋರವಾಗಿ ಜಗ್ಗೇಶ್ ಸಂಯುಕ್ತಾ ಹೆಸರು ಹೇಳದೆಯೇ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ