Select Your Language

Notifications

webdunia
webdunia
webdunia
webdunia

ಕಿರಿಕ್ ಹುಡುಗಿ ಸಂಯುಕ್ತಾಳಿಂದ ಬಿಗ್ ಬಾಸ್ ಮನೆಯೊಳಗೆ ಹಲ್ಲೆ

ಕಿರಿಕ್ ಹುಡುಗಿ ಸಂಯುಕ್ತಾಳಿಂದ ಬಿಗ್ ಬಾಸ್ ಮನೆಯೊಳಗೆ ಹಲ್ಲೆ
ಬೆಂಗಳೂರು , ಗುರುವಾರ, 21 ಡಿಸೆಂಬರ್ 2017 (08:16 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ಸೀಸನ್ ನಲ್ಲೂ ಒಂದು ಹಲ್ಲೆ ಪ್ರಕರಣ ನಡೆದಿದೆ. ಸೆಲೆಬ್ರಿಟಿಯಾಗಿ ಮನೆ ಪ್ರವೇಶಿಸಿದ್ದ ಕಿರಿಕ್ ಪಾರ್ಟಿ ನಾಯಕಿ ಸಂಯುಕ್ತಾ ಹೆಗಡೆ ಸಹ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದಾರೆ.
 

ಡೈನಿಂಗ್ ಏರಿಯಾದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಂಯುಕ್ತಾ ಸಿಟ್ಟಿನಿಂದ ಸಮೀರ್ ಆಚಾರ್ಯಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆರಂಭದಿಂದಲೂ ಸಂಯುಕ್ತಾ ಆಚಾರ್ಯ ವೃತ್ತಿ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೆ, ಮನೆಯವರೆಲ್ಲರಿಗೂ ಆಕೆಯ ಕಿರಿಕ್ ವರ್ತನೆ ಬಗ್ಗೆ ಆಕ್ಷೇಪವಿತ್ತು.

ಈ ಹಿಂದಿನ ಸೀಸನ್ ಗಳಲ್ಲಿಯೂ ಹುಚ್ಚ ವೆಂಕಟ್ ಪ್ರಥಮ್ ಮತ್ತು ಮುರೂರು ರವಿ ಮೇಲೆ ಹಲ್ಲೆ ನಡೆಸಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಂಯುಕ್ತಾ ಸರದಿ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ವೃತ್ತಿಪರವಾಗಿ ನಡೆದುಕೊಳ್ಳಲ್ಲ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿರುವ ಸಂಯುಕ್ತಾ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

40 ವರ್ಷದವರಿಗೆ 20 ವರ್ಷದ ಹುಡುಗನ ಫೀಲ್ ಬರಿಸುವ ಕಲೆ ಜೆನಿಲಿಯಾಗೆ ಗೊತ್ತಿದೆಯಂತೆ; ಹೀಗೆಂದು ಹೇಳಿದವರು ಯಾರು ಗೊತ್ತಾ…?