Publish Date: Wed, 20 Dec 2017 (09:17 IST)
Updated Date: Wed, 20 Dec 2017 (09:21 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ಸ್ಪರ್ಧಿಗಳಿಗೆ ಪ್ರಾಣಭೀತಿ ಕಾಡಿದೆ! ಹೀಗೊಂದು ಸೀಕ್ರೆಟ್ ಟಾಸ್ಕ್ ನೀಡಿರುವ ಬಿಗ್ ಬಾಸ್, ಸದಸ್ಯರು ಫುಲ್ ಕನ್ ಫ್ಯೂಸ್ ಆಗುವಂತೆ ಮಾಡಿದೆ.
ರಿಯಾಜ್ ಮತ್ತು ಅನುಪಮಾಗೆ ಕೊಲೆಗಾರನ ಪಟ್ಟ ನೀಡಿರುವ ಬಿಗ್ ಬಾಸ್ ಈಗಾಗಲೇ ಅವರ ಕೈಯಲ್ಲಿ ಒಬ್ಬೊಬ್ಬರನ್ನೇ ಕೊಲೆ ಮಾಡಿಸುತ್ತಿದೆ. ಬಿಗ್ ಬಾಸ್ ನೀಡುವ ಸೀಕ್ರೆಟ್ ಟಾಸ್ಕ್ ಗಳನ್ನು ಅವರಿಗರಿವಿಲ್ಲದಂತೆಯೇ ಮಾಡಿಸಿ ಕೊಲೆ ಟಾಸ್ಕ್ ಮಾಡಿಸಿಕೊಳ್ಳುತ್ತಿದೆ.
ರಿಯಾಜ್ ಮೇಲೆ ಈಗಾಗಲೇ ಕೆಲವು ಸದಸ್ಯರಿಗೆ ಅನುಮಾನ ಬಂದಿದೆ. ಆದರೆ ಯಾವ ರೀತಿ ಕೊಲೆಯಾಗುತ್ತಿದ್ದೇವೆ ಎಂದು ಅರಿಯದೆ ಬಿಗ್ ಬಾಸ್ ಸದಸ್ಯರು ಕನ್ ಫ್ಯೂಷನ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ