Select Your Language

Notifications

webdunia
webdunia
webdunia
webdunia

ಹೊಡೀತೀನಿ ಅಂತ ಮೊದಲೇ ವಾರ್ನಿಂಗ್ ಕೊಟ್ಟಿದ್ದರು ಸಂಯುಕ್ತಾ!

ಹೊಡೀತೀನಿ ಅಂತ ಮೊದಲೇ ವಾರ್ನಿಂಗ್ ಕೊಟ್ಟಿದ್ದರು ಸಂಯುಕ್ತಾ!
ಬೆಂಗಳೂರು , ಗುರುವಾರ, 21 ಡಿಸೆಂಬರ್ 2017 (09:20 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಟಿ ಸಂಯುಕ್ತಾ ಹೆಗಡೆ ಮತ್ತೊಂದು ರದ್ದಾಂತ ಮಾಡಿಕೊಂಡಿದ್ದಾರೆ. ಸಹ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸುವ ಮೊದಲೇ ಮುಖ ಮೂತಿ ನೋಡದೇ ಹೊಡೀತೀನಿ ಎಂದು ಎಚ್ಚರಿಕೆ ಕೊಟ್ಟಿದ್ದರು!
 

ಟಾಸ್ಕ್ ನಡೆಯುವಾಗ ಏನಾದರೂ, ಮೈ ಮೇಲೆ ಬೀಳೋದು, ಮೈ  ಮುಟ್ಟೋದು ಮಾಡಿದ್ರೆ ಮುಖ ಮೂತಿ ನೋಡದೇ ಹೊಡೀತೀನಿ ಎಂದು ಸಂಯುಕ್ತಾ ತಮಾಷೆಯಾಗಿ ಹೇಳುತ್ತಿದ್ದರೆ, ಸಮೀರ್ ಆಚಾರ್ಯ ನಗುತ್ತಲೇ ಕೂತಿದ್ದರು.

ವಿಪರ್ಯಾಸವೆಂದರೆ ಹಾಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ಟಾಸ್ಕ್ ನಡುವೆ ಹೊಡೆದೇ ಬಿಟ್ಟರು. ಹಲ್ಲೆ ಮಾಡಿದ ತಪ್ಪಿಗೆ ಬಿಗ್ ಬಾಸ್ ಸಂಯುಕ್ತಾಗೆ ಹೊರ ನಡೆಯಲು ಹೇಳಿದ್ದಾರೆ. ಇದಕ್ಕಿಂತ ಮೊದಲು ಇಬ್ಬರನ್ನೂ ಕನ್ ಫೆಷನ್ ರೂಂಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂಯುಕ್ತಾ ಸಮೀರ್ ಕ್ಷಮೆ ಕೇಳಿದ್ದಾರೆ. ಆಗ ಸಮೀರ್ ಕೂಡಾ ನಾನು ನಿಮ್ಮ ಬಳಿ ತಪ್ಪಾಗಿ ನಡೆದುಕೊಂಡಿಲ್ಲ. ನಿಮ್ಮನ್ನು ಮುಟ್ಟಿಲ್ಲ. ನಿಮ್ಮ ಸಿಟ್ಟು ಕಂಟ್ರೋಲ್ ಮಾಡಿಕೊಂಡರೆ ನಿಮ್ಮ ಜೀವನಕ್ಕೆ ಒಳ್ಳೆಯದು ಎಂದು ಬುದ್ಧಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾಗಮತಿ ಟೀಸರ್ ನೋಡಿ ಖುಷ್ ಆದ ಪ್ರಭಾಸ್ ಅನುಷ್ಕಾರನ್ನು ಕರೆದಿದ್ದು ಹೇಗೆ ಗೊತ್ತಾ? (ವಿಡಿಯೋ)