Publish Date: Thu, 21 Dec 2017 (08:49 IST)
Updated Date: Thu, 21 Dec 2017 (08:53 IST)
ಹೈದರಾಬಾದ್: ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಆನ್ ಸ್ಕ್ರೀನ್ ನಲ್ಲಿ ಅದ್ಭುತ ಜೋಡಿ ಎನ್ನುವುದಷ್ಟೇ ಅಲ್ಲ, ತೆರೆಯ ಹೊರಗೂ ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎನ್ನುವುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.
ಬಾಹುಬಲಿ ನಂತರ ಅನುಷ್ಕಾ ಅಭಿನಯಿಸುತ್ತಿರುವ ಸಿನಿಮಾ ಭಾಗಮತಿ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಈ ಟೀಸರ್ ನೋಡಿ ಖುಷಿಯಾದ ಪ್ರಭಾಸ್ ತನ್ನ ಗೆಳತಿ ಬಗ್ಗೆಸ್ವೀಟ್ ಆಗಿ ಕಾಮೆಂಟ್ ಮಾಡಿದ್ದಾರೆ.
‘ಅನುಷ್ಕಾ ಯಾವಾಗಲೂ ತನಗೆ ಸಿಕ್ಕಿದ ಅವಕಾಶದಲ್ಲಿ ಹೊಸದನ್ನು ಮಾಡಲು ಪ್ರಯತ್ನಿಸುತ್ತಾಳೆ. ಆಕೆಗೆ ಮತ್ತು ಇಡೀ ಭಾಗಮತಿ ಚಿತ್ರ ತಂಡಕ್ಕೆ ಶುಭ ಹಾರೈಕೆಗಳು. ಗುಡ್ ಲಕ್ ಸ್ವೀಟಿ’ ಎಂದು ಸ್ವೀಟ್ ಆಗಿ ವಿಶ್ ಮಾಡಿದ್ದಾರೆ ಪ್ರಭಾಸ್.
ಅನುಷ್ಕಾ ಮತ್ತು ಪ್ರಭಾಸ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಗಳಿವೆ. ಅವರ ಅಭಿಮಾನಿಗಳೂ ಈ ಜೋಡಿ ನಿಜ ಜೀವನದಲ್ಲೂ ಒಂದಾಗಲಿ ಎಂದು ಕಾಯುತ್ತಿದೆ. ಅಂತಹದ್ದರಲ್ಲಿ ಪ್ರಭಾಸ್ ರ ಸ್ವೀಟ್ ಕಾಮೆಂಟ್ ನೋಡಿ ಅಭಿಮಾನಿಗಳಿಗೆ ಖುಷಿಯಾಗದೇ ಇದ್ದೀತೇ? ಅದೇನೇ ಇರಲಿ. ಭಾಗಮತಿ ಟೀಸರ್ ನೀವೂ ನೋಡಿ ಎಂಜಾಯ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ