Select Your Language

Notifications

webdunia
webdunia
webdunia
webdunia

ದೇವಸೇನಾ ಬರ್ತ್ ಡೇಗೆ ಭಾಗಮತಿ ಫರ್ಸ್ಟ್ ಲುಕ್ ರಿಲೀಸ್: ರಗಡ್ ಲುಕ್ ನಲ್ಲಿ ಅನುಷ್ಕಾ

ದೇವಸೇನಾ ಬರ್ತ್ ಡೇಗೆ ಭಾಗಮತಿ ಫರ್ಸ್ಟ್ ಲುಕ್ ರಿಲೀಸ್: ರಗಡ್ ಲುಕ್ ನಲ್ಲಿ ಅನುಷ್ಕಾ
ಬೆಂಗಳೂರು , ಮಂಗಳವಾರ, 7 ನವೆಂಬರ್ 2017 (10:44 IST)
ಬೆಂಗಳೂರು: ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಇಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಅವರ ಹೊಸ ಚಿತ್ರ `ಭಾಗಮತಿ’ ಚಿತ್ರತಂಡ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ.

ವಿಭಿನ್ನ ಕಾನ್ಸೆಪ್ಟ್‌ ಇರುವ 'ಭಾಗಮತಿ'ಯಲ್ಲಿ ಅನುಷ್ಕಾ ಲೀಡ್‌ ರೋಲ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಜಿ.ಅಶೋಕ್‌ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ನಟನೆಯ ಹಿಟ್ ಮೂವಿ 'ಮಿರ್ಚಿ' ಚಿತ್ರ ನಿರ್ಮಿಸಿದ್ದ ಯುವಿ ಕ್ರಿಯೇಷನ್‌ ಸಂಸ್ಥೆಯೇ 'ಭಾಗಮತಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

'ಭಾಗಮತಿ' ಫಸ್ಟ್‌ ಲುಕ್‌ ನಲ್ಲಿ ಅನುಷ್ಕಾ ಒಂದು ಕೈಯಲ್ಲಿ ರಕ್ತದ ಕಲೆಗಳಿದ್ದು, ಮತ್ತೊಂದು ಕೈಯಲ್ಲಿ ಸುತ್ತಿಗೆ ಹಿಡಿದುಕೊಂಡು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಉನ್ನಿ ಮುಕುಂದನ್‌, ಆದಿ, ಜಯರಾಂ, ಆಶಾ ಶರತ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏನೋ ಮಾಡುತ್ತೇನೆಂದ ಕಮಲ್ ಹಾಸನ್ ಬರ್ತ್ ಡೇ ಆಚರಣೆಯನ್ನೇ ರದ್ದುಗೊಳಿಸಿದ್ರು!