Select Your Language

Notifications

webdunia
webdunia
webdunia
webdunia

ಪ್ರಭಾಸ್-ಅನುಷ್ಕಾ ನಡುವೆ ಏನೋ ಇದೆ ಎಂದು ಪ್ರೂವ್ ಮಾಡಿತು ಈ ಉಡುಗೊರೆ

ಪ್ರಭಾಸ್
ಹೈದರಾಬಾದ್: ಬಾಹುಬಲಿ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಸಮ್ ಥಿಂಗ್ ಇದೆ, ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಅದಕ್ಕೆ ಮತ್ತಷ್ಟು ಇಂಬು ನೀಡುವಂತಹ ಘಟನೆ ನಡೆದಿದೆ.

 
ನಿನ್ನೆಯಷ್ಟೇ 39 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಭಾಸ್ ಗೆ ಅನುಷ್ಕಾಗೆ ಅದ್ಭುತ ಉಡುಗೊರೆಯೊಂದನ್ನು ನೀಡಿದ್ದಾರೆ. ಇದಕ್ಕೂ ಮೊದಲು ಪ್ರಭಾಸ್ ಅಭಿಮಾನಿಗಳಿಗೆ ತಮ್ಮ ಮುಂದಿನ ಚಿತ್ರ ಸಾಹೋ ದ ಒಂದು ದೃಶ್ಯದ ಫೋಟೋ ಬಿಡುಗಡೆ ಮಾಡಿ ಉಡುಗೊರೆ ನೀಡಿದ್ದರು.

ಆದರೆ ಪ್ರಭಾಸ್ ಗೆ ಅನುಷ್ಕಾ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರಂತೆ. ಅಷ್ಟೇ ಅಲ್ಲ, ಇನ್ ಸ್ಟಾಗ್ರಾಂನಲ್ಲಿ ಆಪ್ತವಾಗಿ ಸಂದೇಶ ಕೂಡಾ ಬರೆದಿದ್ದಾರೆ. ಅಷ್ಟಕ್ಕೂ ಪ್ರಭಾಸ್ ಗೆ ಅನುಷ್ಕಾ ಕಡೆಯಿಂದ ಬಂದ ಗಿಫ್ಟ್ ಕೊಡು ಏನು ಗೊತ್ತಾ?

ಪ್ರಭಾಸ್ ಗೆ ಬೇರೆ ಬೇರೆ ವಿನ್ಯಾಸದ ವಾಚ್ ಗಳೆಂದರೆ ತುಂಬಾ ಇಷ್ಟವಂತೆ. ಅದಕ್ಕೇ ಅನುಷ್ಕಾ ವಿಶಿಷ್ಟ ವಿನ್ಯಾಸದ ವಾಚ್ ಒಂದನ್ನು ಪ್ರಭಾಸ್ ಗೆ ಉಡುಗೊರೆಯಾಗಿ ನೀಡಿದ್ದಾರಂತೆ. ಈಗಲಾದರೂ ಇವರಿಬ್ಬರ ನಡುವೆ ಲವ್ ಇದೆ ಎನ್ನುವುದು ಒಪ್ಪಿಕೊಳ್ಳುತ್ತಾರಾ ಎಂಬುದೇ ಅಭಿಮಾನಿಗಳ ಪ್ರಶ್ನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಶಾಲ್ ಸಂಸ್ಥೆ ಮೇಲೆ ಜಿಎಸ್ ಟಿ ತಂಡ ದಾಳಿ