Select Your Language

Notifications

webdunia
webdunia
webdunia
webdunia

ಏನೋ ಮಾಡುತ್ತೇನೆಂದ ಕಮಲ್ ಹಾಸನ್ ಬರ್ತ್ ಡೇ ಆಚರಣೆಯನ್ನೇ ರದ್ದುಗೊಳಿಸಿದ್ರು!

ಏನೋ ಮಾಡುತ್ತೇನೆಂದ ಕಮಲ್ ಹಾಸನ್ ಬರ್ತ್ ಡೇ ಆಚರಣೆಯನ್ನೇ ರದ್ದುಗೊಳಿಸಿದ್ರು!
ಚೆನ್ನೈ , ಮಂಗಳವಾರ, 7 ನವೆಂಬರ್ 2017 (10:04 IST)
ಚೆನ್ನೈ: ರಾಜಕೀಯಕ್ಕೆ ಎಂಟ್ರಿಕೊಡಲು ತಯಾರಿ ನಡೆಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ಗೆ ಇಂದು 63 ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಕಮಲ್  ಬಗ್ಗೆ ಭಾರೀ ನಿರೀಕ್ಷೆ ಹೊತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

 
ಯಾವುದೇ ಕಾರಣಕ್ಕೂ ಇಂದು ತಮ್ಮ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಳ್ಳಲ್ಲ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ. ಆದರೆ ಕಮಲ್ ಈ ಹಿಂದೆ ಹೇಳಿದಂತೆ ತಮ್ಮ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುವ ಬದಲು ತಮ್ಮ ಅಭಿಮಾನಿಗಳು ಆಯೋಜಿಸಿರುವ ವೈದ್ಯಕೀಯ ಕ್ಯಾಂಪ್ ಗೆ ಭೇಟಿ ಕೊಡಲಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ. ಈ ಮೂಲಕ ಅವರ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲು ಹೊರಟಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ರೈ ಬಚ್ಚನ್ ಮತ್ತೊಂದು ಮುಖ ಬಯಲು!