Publish Date: Sat, 04 Nov 2017 (09:05 IST)
Updated Date: Sat, 04 Nov 2017 (09:07 IST)
ನವದೆಹಲಿ: ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್ ಸಾಲಿಗೆ ಪ್ರಕಾಶ್ ರೈ ಸೇರಿಕೊಂಡಿದ್ದಾರೆ. ಕಮಲ್ ದಾಟಿಯಲ್ಲೇ ಪ್ರಕಾಶ್ ರೈ ಕೂಡಾ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಮೌನದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಪ್ರಕಾಶ್ ರೈ ಇದೀಗ ಮತ್ತೊಮ್ಮೆ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದಾರೆ.
‘ಧರ್ಮ ಸಂಸ್ಕೃತಿ ಹಾಗೂ ನೈತಿಕತೆಯ ಹೆಸರು ಹೇಳಿಕೊಂಡು ಜನತೆಯಲ್ಲಿ ಭಯ ಹುಟ್ಟಿಸುವುದು ಭಯೋತ್ಪಾದನೆ ಅಲ್ಲದಿದ್ದರೆ ಇನ್ನೇನು?’ ಎಂದು ಪ್ರಕಾಶ್ ರೈ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಪ್ರಕಾಶ್ ರೈ ಗೋ ಹತ್ಯೆ ನಿಷೇಧ ವಿರೋಧಿಸಿದವರ ವಿರುದ್ಧ ಹಲ್ಲೆ ನಡೆಸುವುದು, ಯುವ ಜೋಡಿಗಳ ಮೇಲೆ ಹಲ್ಲೆ ನಡೆಸುವುದು ಭಯೋತ್ಪಾದನೆ ಅಲ್ಲವೇ ಎಂದು ಚಾಟಿ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ