Publish Date: Fri, 03 Nov 2017 (17:08 IST)
Updated Date: Fri, 03 Nov 2017 (17:11 IST)
ಹಿಂದು ಭಯೋತ್ಪಾದನೆಯಿದೆ ಎಂದು ಹೇಳಿಕೆ ನೀಡಿದ್ದ ಬಹುಭಾಷಾ ನಟ ಕಮಲ್‌ಹಾಸನ್ ವಿರುದ್ಧ ಕೇಸ್ ದಾಖಲಾಗಿದೆ.
ಆನಂದ ವಿಕಟನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್, ಹಿಂದು ಭಯೋತ್ಪಾದನೆ ಇಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಿಂದು ಭಯೋತ್ಪಾದನೆ ಅಸ್ತಿತ್ವದಲ್ಲಿದೆ ಎಂದು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಗುರಿಯಾಗಿದೆ.
ಕಮಲ್‌ಹಾಸನ್ ಹೇಳಿಕೆಯಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಮಲ್‌ಹಾಸನ್ ಹೇಳಿಕೆಗೆ ಮತ್ತೊಬ್ಬ ಬಹುಭಾಷಾ ನಟ ಪ್ರಕಾಶ್ ರೈ ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.