Select Your Language

Notifications

webdunia
webdunia
webdunia
webdunia

ಬಾಯ್‌ಫ್ರೆಂಡ್‌ನನ್ನು ಪತ್ತೆ ಹಚ್ಚಲು ಗ್ಯಾಂಗ್‌ರೇಪ್ ಕೇಸ್ ದಾಖಲಿಸಿದ ಯುವತಿ

ಬಾಯ್‌ಫ್ರೆಂಡ್‌ನನ್ನು ಪತ್ತೆ ಹಚ್ಚಲು ಗ್ಯಾಂಗ್‌ರೇಪ್ ಕೇಸ್ ದಾಖಲಿಸಿದ ಯುವತಿ
ಪುಣೆ , ಸೋಮವಾರ, 30 ಅಕ್ಟೋಬರ್ 2017 (14:27 IST)
ಫೋನ್ ಕರೆಗಳನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದ ಬಾಯ್‌ಫ್ರೆಂಡ್‌ ವಂಚನೆಯಿಂದ ಆಕ್ರೋಶಗೊಂಡ 24 ವರ್ಷದ ಯುವತಿಯೊಬ್ಬಳು ಆತನನ್ನು ಪತ್ತೆ ಮಾಡಲು ನಕಲಿ ಗ್ಯಾಂಗ್‌ರೇಪ್ ಕೇಸ್ ದಾಖಲಿಸಿರುವ ಘಟನೆ ಲಾತೂರ್‌‌ನಲ್ಲಿ ನಡೆದಿದೆ
ಗ್ಯಾಂಗ್‌ರೇಪ್ ಕೇಸ್ ದಾಖಲಿಸಿಕೊಂಡ ಪೊಲೀಸರು ಯುವತಿಯ ಬಾಯ್‌ಫ್ರೆಂಡ್‌‌ನನ್ನು ಪತ್ತೆ ಮಾಡಿ ಕರೆ ತಂದ ನಂತರ ಯುವತಿ ಮತ್ತು ಆರೋಪಿ ಇಬ್ಬರು ಪ್ರೇಮಿಗಳಾಗಿದ್ದು ವಿವಾಹವಾಗಲು ಬಯಸಿದ್ದಾರೆ ಎನ್ನುವುದು ಗೊತ್ತಾಗಿದೆ.
 
ಯುವತಿ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿದ್ದರೂ ಮಾನವೀಯತೆಯ ಆಧಾರದ ಮೇಲೆ ಆಕೆಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಬ್ಬರು ಪ್ರೇಮಿಗಳು ಅಕ್ಟೋಬರ್ 27 ರಂದು ವಿವಾಹವಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಿಲಿಂದ್ ಗಾಯಕ್ವಾಡ್ ತಿಳಿಸಿದ್ದಾರೆ.
 
ಯುವತಿ ಮತ್ತು ಯುವಕ ಇಬ್ಬರು ಲಾತೂರ್ ಮೂಲದವರಾಗಿದ್ದು ಪರಸ್ಪರ ಪ್ರೇಮಿಸುತ್ತಿದ್ದರು. ಉದ್ಯೋಗದ ಹುಡುಕಾಟದಲ್ಲಿ ಯುವಕ ಪುಣೆ ನಗರಕ್ಕೆ ಬಂದಿದ್ದ ಎನ್ನಲಾಗಿದೆ.
 
ಪುಣೆಗೆ ತೆರಳಿದ ನಂತರ ಬಾಯ್‌ಫ್ರೆಂಡ್ ಫೋನ್ ಕರೆಗಳನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದರಿಂದ ಯುವತಿ ಆತನನ್ನು ಹುಡುಕಲು ನಗರಕ್ಕೆ ಬಂದು ಕೊಂದ್ವಾ ಪೊಲೀಸ್ ಠಾಣೆಯಲ್ಲಿ ಪ್ರೇಮಿಯ ವಿರುದ್ಧ ಗ್ಯಾಂಗ್‌ರೇಪ್ ದೂರು ದಾಖಲಿಸಿದ್ದಾಳೆ.
 
ಪೊಲೀಸರು ಆರೋಪಿ ಯುವಕನ ವಿಚಾರಣೆ ನಡೆಸಿದಾಗ, ಯುವತಿಯನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಲ್ಲದೇ ಆಕೆ ನಿರಂತರವಾಗಿ ಮ್ಯಾಸೇಜ್‌ಗಳನ್ನು ಕಳುಹಿಸುತ್ತಿರುವುದರಿಂದ ಬೇಸರಗೊಂಡು ಪೋನ್ ಕರೆಗಳನ್ನು ಸ್ವೀಕರಿಸುವದು ನಿಲ್ಲಿಸಿದ್ದೆ. ತಾನು ಪ್ರೀತಿಸುತ್ತಿದ್ದ ಯುವತಿ ಪುಣೆಗೆ ಬಂದಿರುವುದು ಗೊತ್ತಿರಲಿಲ್ಲ ಎಂದು ತಿಳಿಸಿದ್ದಾನೆ.   
 
ನಂತರ ಯುವಕ ಮತ್ತು ಯುವತಿಯನ್ನು ವಿಚಾರಣೆ ನಡೆಸಿದ ನಂತರ ಬಿಡುಗಡೆಗೊಳಿಸಲಾಯಿತು ಎಂದು ಕೊಂದವಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ